ಟ್ರಾಫಿಕ್ ಫೈನ್' ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ

ಟ್ರಾಫಿಕ್ ಫೈನ್' ರಿಯಾಯಿತಿ ಮತ್ತೆ ಎರಡು ವಾರ ವಿಸ್ತರಣೆ

ಬೆಂಗಳೂರು : ಟ್ರಾಫಿಕ್ ಫೈನ್' ರಿಯಾಯಿತಿಯನ್ನು ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದಅವರು .

ಶೇ. 50 ರ ರಿಯಾಯಿತಿ ವಿಸ್ತರಣೆ ಮಾಡುವಂತೆ ಮನವಿ ಬಂದಿತ್ತು, ಆದ್ದರಿಂದ ಟ್ರಾಫಿಕ್ ಫೈನ್' ರಿಯಾಯಿತಿಯನ್ನು ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗಿದೆ, ನಾಳೆ ಈ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ದಂಡ ಕಟ್ಟಲಿಕ್ಕಿರುವ ವಾಹನ ಸವಾರರಿಗೆ ಇನ್ನೂ 2 ವಾರ ಸಮಯ ಸಿಕ್ಕಿದಂತಾಗಿದೆ.

ಶೇ. 50 ರ ರಿಯಾಯಿತಿ ಸೌಲಭ್ಯದ ಮೂಲಕ ರಾಜ್ಯಾದ್ಯಂತ 9 ದಿನದಲ್ಲಿ 52.49 ಲಕ್ಷ ಕ್ಕೂ ಹೆಚ್ಚು ಕೇಸ್ ಗಳಿಂದ ಒಟ್ಟು 122.07 ಕೋಟಿ ರೂ. ದಂಡ ಸಂಗ್ರವಾಗಿದೆ.ಈ ಬಗ್ಗೆ ಸಂಚಾರ ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಸಂಚಾರಿ ದಂಡ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ ಘೋಷಣೆಯಾದ ದಿನದಿಂದ ನಿನ್ನೆಯವರೆಗೆ 52.49 ಲಕ್ಷ ಪ್ರಕರಣಗಳಲ್ಲಿ 122.07 ಕೋಟಿ ರೂಪಾಯಿ ದಂಡ ಕಲೆಕ್ಷನ್ ಆಗಿದೆ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಗೆ ಶನಿವಾರ ಕೊನೆ ದಿನವಾಗಿತ್ತು. ಕೊನೆಯ ದಿನ ಬೆಂಗಳೂರಿನಲ್ಲಿ 9.45 ಲಕ್ಷ ಪ್ರಕರಣಗಳಿಂದ 31.26 ಕೋಟಿ ರು. ದಂಡ ಸಂಗ್ರಹವಾಗಿದೆ. ಕಳೆದ 9 ದಿನಗಳಲ್ಲಿ ದಿನವೊಂದರಲ್ಲಿ ಸಂಗ್ರಹವಾದ ಅತಿ ಹೆಚ್ಚು ದಂಡದ ಮೊತ್ತ ಇದಾಗಿದೆ.

ಯಾವ ಯಾವ ದಿನ ಎಷ್ಟು ದಂಡ ವಸೂಲಿ

ಫೆಬ್ರವರಿ 3 - 2.24 ಲಕ್ಷ ಕೇಸ್, 7 ಕೋಟಿ ರೂ.

ಫೆಬ್ರವರಿ 4- 3 ಲಕ್ಷ ಕೇಸ್, 9 ಕೋಟಿ ರೂ.

ಫೆಬ್ರವರಿ 5- 2.87 ಲಕ್ಷ ಕೇಸ್, 7.49 ಕೋಟಿ ರೂ.

ಫೆಬ್ರವರಿ 06- 3.34 ಲಕ್ಷ ಕೇಸ್, 9.57 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.