ಬೆಂಗಳೂರಿನಲ್ಲಿ ಪತಿಯಿಂದಲೇ ಘೋರ ಕೃತ್ಯ : ಪತ್ನಿಯ ಕತ್ತು ಸೀಳಿ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಪತಿಯಿಂದಲೇ ಘೋರ ಕೃತ್ಯ : ಪತ್ನಿಯ ಕತ್ತು ಸೀಳಿ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ನಂಜಪ್ಪ ಸರ್ಕಲ್ ಬಳಿ ನಡೆದಿದೆ.

ನಂಜಪ್ಪ ಸರ್ಕಲ್ ಬಳಿಯ ಮನೆಯಲ್ಲಿ ಘಟನೆ ನಡೆದಿದ್ದು, ಮನೆ ಬಾಗಿಲಲ್ಲೇ ಹೆಂಡತಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿಯಾಗಿದ್ದಾನೆ.

ಕೌಸರ್ ಮುಬೀನ್ (34) ಎಂಬ ಮಹಿಳೆ ಕೊಲೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪತ್ನಿ ಕೌಸರ್ ಮುಬೀನ್ ಗಂಡ ಕೌಸರ್ ನಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಇಂದುಕೌಸರ್ ಮನೆ ಬಾಗಿಲು ಬಳಿ ಬಂದು ಪತಿ ಜಗಳವಾಡಿದ್ದಾನೆ. ಈ ವೇಳೆ ಮನೆ ಬಾಗಿಲಲ್ಲೇ ಹೆಂಡತಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿಯಾಗಿದ್ದಾನೆ.ಪತ್ನಿ ಕೌಸರ್ ಮುಬೀನ್ ಒದ್ದಾಡಿ ಪ್ರಾಣಬಿಟ್ಟಿದ್ದಾರೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.