ದತ್ತಾತ್ರೇಯನಿಗೆ ಅವಮಾನ' ಮಾಡಿದ 'ಬಿಜೆಪಿ ಶಾಸಕ ಸುರೇಶ್' : 'ಚಪ್ಪಲಿ ಧರಿಸಿ ಶೋಭಾಯಾತ್ರೆʼಯಲ್ಲಿ ಭಾಗವಹಿಸಿದಕ್ಕೆ ಆಕ್ರೋಶ

ಚಿಕ್ಕಮಗಳೂರು : ಚಪ್ಪಲಿ ಧರಿಸಿ ಶೋಭಾಯಾತ್ರೆಯಲ್ಲಿ ಭಾಗಿಯಾದ ಬಿಜೆಪಿ ಶಾಸಕ ಸುರೇಶ್ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ ವಕ್ತವಾಗಿದೆ.ಜಿಲ್ಲೆಯ ತರೀಕರೆ ಪಟ್ಟಣದಲ್ಲಿ ಬುಧವಾರ ನಡೆದ ಶೋಭಾಯಾತ್ರೆಯಲ್ಲಿ ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಚಪ್ಪಲಿ ಹಾಕಿಕೊಂಡು ಭಾಗಿಯಾಗಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆ ಆಕ್ರೋಶ ಹೊರ ಹಾಕಿದ್ದಾರೆ. ಮಾಲೆ ಧರಿಸಿ, ಚಪ್ಪಲಿ ಹಾಕಿಕೊಂಡು ದತ್ತಾತ್ರೇಯನಿಗೆ ಅವಮಾನಿಸಿದ್ದೀರಿ ಎಂದು ದತ್ತಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.