ರೊಮ್ಯಾಂಟಿಕ್ ಜೋಡಿ ಯಶ್-ರಾಧಿಕಾ ಪಂಡಿತ್‍ಗೆ ವಿವಾಹ ವಾರ್ಷಿಕೋತ್ಸವ

ಸ್ಯಾಂಡಲ್‍ವುಡ್‍ನ ರೊಮ್ಯಾಂಟಿಕ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗೆ ಇಂದು 6ನೇ ವಿವಾಹ ವಾರ್ಷಿಕೋತ್ಸವ. ಕಿರುತೆರೆಯಲ್ಲಿ ನಟಿಸುತ್ತಿದ್ದ "ನಂದಗೋಕುಲ" ಧಾರಾವಾಹಿ ಮೂಲಕ ಯಶ್ & ರಾಧಿಕಾ ನಡುವೆ ಪ್ರೀತಿ ಚಿಗುರಿತ್ತು. ನಂತರ 'ಮೊಗ್ಗಿನ ಮನಸು', 'ಡ್ರಾಮಾ', 'Mr & Mrs ರಾಮಾಚಾರಿ' & ಸಂತು ಸ್ರೈಟ್ ಫಾರ್ವರ್ಡ್ ಚಿತ್ರಗಳಲ್ಲಿ ಅಭಿನಯಿಸಿದ ಈ ಜೋಡಿ, ಡಿಸೆಂಬರ್ 9, 2016ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಯಥರ್ವ್ ಹಾಗೂ ಆಯ್ರಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.