ವೇಗದ ಆರ್ಥಿಕತೆ ಹೊಂದಿರುವ ರಾಜ್ಯಗಳು; ಕರ್ನಾಟಕಕ್ಕೆ ಎಷ್ಟನೇ ಸ್ಥಾನ

ಹಣಕಾಸು ವರ್ಷ-2022ರ ವಾರ್ಷಿಕ ಜಿಎಸ್‍ಡಿಪಿ ದಂತ್ತಾಂಶದ ಪ್ರಕಾರ, ವೇಗವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ 10 ರಾಜ್ಯಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಶೇ.8.2ರಷ್ಟು ವಾರ್ಷಿಕ ಬೆಳವಣಿಗೆ ದರ ಹೊಂದಿರುವ ಗುಜರಾತ್ ಮೊದಲ ಸ್ಥಾನದಲ್ಲಿದೆ. ನಂತರ ಕ್ರಮವಾಗಿ ಕರ್ನಾಟಕ(ಶೇ.7.3), ಹರ್ಯಾಣ(ಶೇ.6.8), ಮಧ್ಯಪ್ರದೇಶ(ಶೇ.6.7), ಆಂಧ್ರ ಪ್ರದೇಶ(ಶೇ.6.5), ತೆಲಂಗಾಣ(ಶೇ.6.1), ತಮಿಳುನಾಡು(ಶೇ.5.8), ಓಡಿಶಾ(ಶೇ.5.7), ದೆಹಲಿ(ಶೇ.5.6), ಅಸ್ಸಾಂ(ಶೇ.5.3) ಸ್ಥಾನ ಪಡೆದುಕೊಂಡಿವೆ.