ಹುಬ್ಬಳ್ಳಿಯಲ್ಲಿ ಇಂದು ನಾಳೆ ಬಿಜೆಪಿ ಕಾರ್ಯಕಾರಿಣಿ
ಹುಬ್ಬಳ್ಳಿಯಲ್ಲಿ ಇಂದು ನಾಳೆ ಬಿಜೆಪಿ ಕಾರ್ಯಕಾರಿಣಿ
ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಚೋಟಾ ಮುಂಬಯಿ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಲ್ಲಿ ಸರಿಯಾಗಿ 11 ವರ್ಷಗಳ ಬಳಿಕ ಇಂದಿನಿಂದ 2 ದಿನಗಳ ಕಾಲ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ನವವಧುವಿನಂತೆ ಸಿಂಗಾರಗೊಂಡಿದೆ.
ನಗರದ ಗೋಕುಲ್ ರಸ್ತೆಯಲ್ಲಿ ರುವ ಡೇನಿಸನ್ ಹೋಟೆಲ್ ನಲ್ಲಿ ನಡೆಯಲಿರುವ ಸಭೆಗಾಗಿ ಸಕಲ ಪಕ್ಷ ಸಿದ್ಧತೆ ಮಾಡಿಕೊಂಡಿದೆ.
ಮದ್ಯಾಹ್ನ 12 ಘಂಟೆಗೆ ಕಾರ್ಯಕಾರಿಣಿ ಸಭೆ ಉದ್ಘಾಟನೆಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ನೆರವೇರಿಸಲಿದ್ದಾರೆ. ಸಭೆಯಲ್ಲಿ ರಾಜ್ಯ ಸಹ ಪ್ರಭಾರಿ ಡಿ. ಅರುಣಾ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಸೇರಿದಂತೆ ಎಲ್ಲ ಮಂತ್ರಿಗಳು ಹಾಗೂ ಶಾಸಕರು, ವಿವಿಧ ಘಟಕದ ಅಧ್ಯಕ್ಷರಗಳು, ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯ ಕಾರಿಣಿ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಗೈರು ಎದ್ದು ಕಾಣಲಿದೆ. ಈ ಕಾರ್ಯಕಾರಿಣಿಯಲ್ಲಿ ಸುಮಾರು 700 ಜನ ಭಾಗವಹಿಸುವರಿದ್ದರು. ಆದರೆ ಕೋವಿಡ್
ನಿಯಮಾನುಸಾರ ಸಭೆಗೆ 300 ಜನರಿಗೆ ಮಿತಿ ಮಾಡಲಾಗಿದೆ.
ನಗರದ ಪ್ರಮುಖ ಬೀದಿಗಳಲ್ಲಿ ಮುಖಂಡರ ಪೋಸ್ಟರ್, ಬ್ಯಾನರ ಮತ್ತು ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಒಟ್ಟಾರೆ ವಾಣಿಜ್ಯ ನಗರಿ ಸಂಪೂರ್ಣ ಕೇಸರಿಮಯವಾಗಿದೆ.
9 ಲೈವ್ ನ್ಯೂಸ್ ಹುಬ್ಬಳ್ಳಿ