Breaking News : ಸೆ.12ಕ್ಕೆ 'NEET-2021' ಪರೀಕ್ಷೆ : ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

Breaking News : ಸೆ.12ಕ್ಕೆ 'NEET-2021' ಪರೀಕ್ಷೆ : ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) 2021 ದೇಶಾದ್ಯಂತ ಸೆಪ್ಟೆಂಬರ್ 12 ರಂದು ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಾಧಾನ್ ಮಾಹಿತಿ ನೀಡಿದರು. ಕಚೇರಿಗೆ ಸೇರಿದ ಕೆಲವೇ ದಿನಗಳಲ್ಲಿ, ಪ್ರಧಾನ್ ಅವರು ವಿದ್ಯಾರ್ಥಿಗಳ ಬಹುನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ನೀಟ್ 2021ರ ಅರ್ಜಿ ಪ್ರಕ್ರಿಯೆ ನಾಳೆ ಸಂಜೆ 5 ರಿಂದ ntaneet.nic.in ರಿಂದ ಪ್ರಾರಂಭವಾಗಲಿದೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, NEET(UG)-2021ರ ಪರೀಕ್ಷೆಯನ್ನು ಸೆಪ್ಟೆಂಬರ್ 12ರಂದು ನಡೆಸಲಾಗುತ್ತಿದೆ. ಕೊರೋನಾ ಸೋಂಕಿನ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಇಂತಹ ಪರೀಕ್ಷೆಗೆ ನಾಳೆ ಸಂಜೆ 5 ಗಂಟೆಯಿಂದ ಅರ್ಜಿ ಸಲ್ಲಿಕೆ NTA ವೆಬ್ ಸೈಟ್ ಮೂಲಕ ಆರಂಭಗೊಳ್ಳಲಿದೆ ಎಂಬುದಾಗಿ ತಿಳಿಸಿದ್ದಾರೆ.