ಅಶ್ಲೀಲ ಪದ ಬಳಸಿ ವಿಡಿಯೋ ಚಿತ್ರೀಕರಿಸಿದ ಪ್ರಿನ್ಸಿಪಾಲ, ಅಮಾನತ್ತಿಗೆ ಒತ್ತಾಯಿಸಿ ಶ್ರೀರಾಮ ಸೇನೆ ಪ್ರತಿಭಟನೆ.

ಕಾಲೇಜು ವಿದ್ಯಾರ್ಥಿನಿಯರಿಗೆ ಅಶ್ಲೀಲ ಪದ ಬಳಸಿದ ಧಾರವಾಡ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಸ್ ಬಿ ಪಾಟೀಲನ್ನು ಅಮಾನತ್ತಿಗೆ ಒತ್ತಾಯಿಸಿ, ಶ್ರೀರಾಮಸೇನೆ ಕಾರ್ಯಕರ್ತರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ರು. ಧಾರವಾಡದ ಕುಮಾರೇಶ್ವರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರಾಂಶುಪಾಲರ ಭಾವಚಿತ್ರವನ್ನು ಧಹನ ಮಾಡಿದರು. ಪ್ರತಿಭಟನೆಕಾರರು ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದ್ರು. ಅನಂತರ ರಾಮಸೇನೆ ಕಾರ್ಯಕರ್ತರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ ಪ್ರಾಂಶುಪಾಲ ಎಸ್. ಬಿ. ಪಾಟೀಲ ಅಶ್ಲೀಲ ಪದ ಬಳಸಿ ವಿದ್ಯಾರ್ಥಿನಿಯರಿಗೆ ಹಿಂಸಿಸುತ್ತಿದ್ದು, ಕಾಮುಕ ಶಿಕ್ಷಕನನ್ನು ಕೂಡಲೇ ಅಮಾನತ್ತು ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ರು.