ಕಡಿಮೆ ಸಕ್ಕರೆ ಹಾಕಿದ ʻಟೀʼ ಕೊಟ್ಟ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಯುವಕ

ಮಲಪ್ಪುರಂ(ಕೇರಳ): ಕಡಿಮೆ ಸಕ್ಕರೆ ಹಾಕಿದ ಟೀ ಕೊಟ್ಟ ಹೋಟೆಲ್ ಮಾಲೀಕನಿಗೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಆಘಾತಕಾರಿ ಕೇರಳದ ಮಲಪ್ಪುರಂನಲ್ಲಿ ಘಟನೆ ನಡೆದಿದೆ.
ಮಲಪ್ಪುರಂ ತಾನೂರ್ ಟೌನ್‌ನಲ್ಲಿರುವ ಟಿಎ ರೆಸ್ಟೋರೆಂಟ್‌ನಲ್ಲಿ ಮಂಗಳವಾರ ಬೆಳಗ್ಗೆ 5.30ಕ್ಕೆ ಈ ಘಟನೆ ನಡೆದಿದೆ.
ಮಾಲೀಕ ಕೊಟ್ಟ ಟೀಯಲ್ಲಿ ಸಕ್ಕರೆ ಕಡಿಮೆಯಾಗಿದೆ ಎಂಬ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಸುಬೈರ್ ಹೋಟೆಲ್‌ನಿಂದ ಹೊರ ನಡೆದಿದ್ದ. ಇದಾದ ಸ್ವಲ್ಪ ಅಮಯದ ನಂತ್ರ, ಅದೇ ಹೋಟೆಲ್‌ಗೆ ಬಂದ ಸುಬೈರ್ ಹೋಟೆಲ್ ಮಾಲೀಕನಿಗೆ ಹಲವು ಬಾರಿ ಇರಿದಿದ್ದಾನೆ.