ಪಾಪ ಅವರದ್ದು ಪ್ರೋಗ್ರಾಮಿಂಗ್ ಎಂಡ್ ಆಗ್ಬಿಟ್ಟಿದೆ; ಭ್ರಷ್ಟಾಚಾರ ಎಂದ್ರೆ ನೆನಪಾಗುವುದೇ ಡಿಕೆಶಿ; ಸಚಿವ ಅಶ್ವತ್ಥನಾರಾಯಣ ವ್ಯಂಗ್ಯ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಪಾಪ ಅವರದ್ದು ಪ್ರೋಗ್ರಾಮಿಂಗ್ ಎಂಡ್ ಆಗ್ಬಿಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವತ್ಥನಾರಾಯಣ, 40%, 100% ಗಿರಾಕಿ ಯಾರಾದರೂ ಇದ್ದರೆ ಅದು ಡಿಕೆಶಿ.
ಭ್ರಷ್ಟಾಚಾರ ಎಂದಾಗ ಹೆಸರು ಬರುವುದೇ ಡಿ.ಕೆ. ಶಿವಕುಮಾರ್ ಎಂದು, ಕಾಂಗ್ರೆಸ್ ಅಂದರೆ ಗುಳುಂ ಎಂದು ಲೇವಡಿ ಮಾಡಿದ್ದಾರೆ.