ಹುಬ್ಬಳ್ಳಿ- ಧಾರವಾಡ ಕುಡಿಯುವ ನೀರಿನ ಸಮಸ್ಯೆ - ಬೆಂಗಳೂರಿನಲ್ಲಿ ವಿಶೇಷ ಸಭೆ

ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಬಗ್ಗೆ ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಈ ಭಾಗದ ಸಂಸದರಾದ ಪ್ರಲ್ಹಾದ ಜೋಶಿಯವರು ನಗರಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಿಶೇಷ ಸಭೆಯನ್ನು ಆಯೋಜಿಸಿದ್ದರು. ಈ ಸಭೆಯಲ್ಲಿ ಹದಿನೈದು ದಿನಗಳೊಗಾಗಿ L&T ಪೂರ್ಣ ಪ್ರಮಾಣದಲ್ಲಿ ಜವಾಬ್ದಾರಿ ವಹಿಸಿಕೊಂಡು ಕನಿಷ್ಠ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲೆಬೇಕೆಂಬ ನಿರ್ದೇಶನ ನೀಡಲಾಯಿತು. ಕೇಂದ್ರ ಸಚಿವರು ನಿರ್ದಿಷ್ಟವಾದ ಸೂಚನೆ ನೀಡಿ ಕೂಡಲೆ ಕಾಮಗಾರಿಗಳು ಕ್ಷಿಪ್ರ ಗತಿಯಲ್ಲಿ ಜರುಗಬೇಕು ಹಾಗು ಪ್ರತಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಆಗಲೆಬೇಕೆಂದು ಸೂಚನೆ ನೀಡಿದರು
ಈ ಸಭೆಯಲ್ಲಿ ನಗರಾಭಿವೃದ್ಧಿ ಸಚಿವರು ಭೈರತಿ ಬಸವರಾಜ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಲಪ್ಪ ಆಚಾರ ಅವರು ಸಭೆಗೆ ಸಲಹೆ ಸೂಚನೆ ನೀಡಿ ಒಟ್ಟಾರೆ ಅವಳಿನಗರದ ನೀರು ಸರಬರಾಜು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ದಿನಮಾನಗಳಲ್ಲಿ ನೀರು ಸರಬರಾಜು ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡದೆ ಹೋದಲ್ಲಿ ಗುತ್ತಿಗೆದಾರರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವದೆಂದು ಸೂಚನೆ ನೀಡಿದರು.
ಈ ಸಭೆಯಲ್ಲಿ ಶಾಸಕರು ಅರವಿಂದ ಬೆಲ್ಲದ ವಿಧಾನ ಪರಿಷತ್ ಸದಸ್ಯರು, ಬಸವರಾಜ ಹೊರಟ್ಟಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು, ಈರೇಶ ಅಂಚಟಗೇರಿ, ನಗರಾಭಿವೃದ್ಧಿ ಕಾರ್ಯದರ್ಶಿಗಳು, ಅಜಯ ನಾಗಭೂಷಣ, ದೀಪಾ ಚೋಳನ, ವಾಟರ ಬೋರ್ಡ್ ಅಧಿಕಾರಿಗಳು, ಧಾರವಾಡ ವಿಭಾಗದಿಕಾರಿ ಮೋಹನರಾಜ, ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್ ವಿಶಾಲ, ಪಾಲಿಕೆ ಆಯುಕ್ತರು ಗೋಪಾಲಕೃಷ್ಣ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.