ರಾಷ್ಟ್ರಾದ್ಯಂತ ಪ್ರತಿಭಟನೆ; ಇರಾನ್‌ನಲ್ಲಿ ಇಬ್ಬರು ಪುರುಷರಿಗೆ ಗಲ್ಲು

ದುಬೈ :ಇರಾನ್ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರೋಧಿಸಿ ರಾಷ್ಟ್ರಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಇರಾನ್ ಸರ್ಕಾರ ಇನ್ನಿಬ್ಬರು ಪುರುಷರನ್ನು ಶನಿವಾರ ಗಲ್ಲಿಗೇರಿಸಿದೆ. ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಸೈನಿಕರೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇರೆಗೆ ಮೊಹಮ್ಮದ್ ಕರಾಮಿ ಹಾಗೂ ಮೊಹಮ್ಮದ್ ಹೊಸೇನಿ ಎಂಬ ಇಬ್ಬರನ್ನು ಗಲ್ಲಿಗೇರಿಸಲಾಗಿದೆ.
ಪ್ರತಿಭಟನೆಗಳನ್ನು ಹತ್ತಿಕ್ಕಲು ಇರಾನ್ ಮರಣದಂಡನೆಯ ಅಸ್ತ್ರ ಬಳಸಿಕೊಳ್ಳುತ್ತಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹಿಜಾಬ್ ವಿರುದ್ಧದ ಪ್ರತಿಭಟನೆ ಶುರುವಾದಾಗಿನಿಂದ ಇದುವರೆಗೆ 16 ಮಂದಿಯನ್ನು ಗಲ್ಲಿಗೇರಿಸಲಾಗಿದೆ. 517 ಪ್ರತಿಭಟನಾಕಾರರನ್ನು ಕೊಂದಿದ್ದು,19,200 ಮಂದಿಯನ್ನು ಈ ವರೆಗೆ ಬಂಧಿಸಲಾಗಿದೆ ಎಂದು ಮಾನವಹಕ್ಕು ಹೋರಾಟಗಾರರು ಹೇಳಿದ್ದಾರೆ.