ಓಲ್ಡ್‌ ಇಸ್‌ ಗೋಲ್ಡ್‌!

ಓಲ್ಡ್‌ ಇಸ್‌ ಗೋಲ್ಡ್‌!

ಕನ್ನಡದಲ್ಲಿ ಬಿಗ್‌ ಬಜೆಟ್‌, ಬಿಗ್‌ ಸ್ಟಾರ್ ಮತ್ತು ಪ್ಯಾನ್‌ ಇಂಡಿಯಾ ಸಿನಿಮಾಗಳಿಗೆ ಮಾತ್ರ ಬೇಡಿಕೆಯಿದೆ. ಇಂಥ ಸಿನಿಮಾಗಳ ರೈಟ್ಸ್‌ಗೆ ಡಿಮ್ಯಾಂಡ್‌ ಕೂಡ ಹೆಚ್ಚಾಗಿ ಇರುವುದರಿಂದ, ಈ ಸಿನಿಮಾಗಳು ಆರಂಭದಲ್ಲಿಯೇ ಒಂದಷ್ಟು ಗಳಿಕೆ ಮಾಡಿಕೊಂಡು ನಿರ್ಮಾಪಕರನ್ನು ಸೇಫ್ ಮಾಡುತ್ತವೆ ಎಂಬ ಮಾತು ಚಿತ್ರರಂಗದಲ್ಲಿದೆ.

ಆದರೆ ಈ ಮಾತಿಗೆ ಅಪವಾದವೆಂಬಂತೆಕೆಲವು ಸಿನಿಮಾಗಳು, ಇದ್ಯಾವುದೂ ಇಲ್ಲದೇ ತಮ್ಮ ಕಂಟೆಂಟ್‌, ಪ್ರಸೆಂಟೇಶನ್‌ ಮೂಲಕವೇ ಚಿತ್ರರಂಗದಲ್ಲಿ ಸದ್ದಿಲ್ಲದೆ ಡಿಮ್ಯಾಂಡ್‌ ಪಡೆದುಕೊಳ್ಳುತ್ತವೆ. ಹಾಗೇ ನಿರ್ಮಾಪಕರನ್ನು ಸೇಫ್ ಮಾಡುವಲ್ಲಿಯೂ ಯಶಸ್ವಿ ‌ ಯಾಗುತ್ತವೆ. ಇಂಥದ್ದೊಂದು ಚಿತ್ರ “ಓಲ್ಡ್‌ ಮಾಂಕ್‌’. ಸೆಟ್ಟೇರಿದಾಗಿನಿಂದಲೂ‌ ತನ್ನ ಟೈಟಲ್‌ ಮತ್ತು ಕಂಟೆಂಟ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ “ಓಲ್ಡ್‌ ಮಾಂಕ್‌’ ಈಗ ತೆರೆಗೆ ಬರಲು ತಯಾರಾಗಿದೆ.

ಈಗಾಗಲೇ ಬಿಡುಗಡೆ ‌ ಯಾಗಿರುವ “ಓಲ್ಡ್‌ ಮಾಂಕ್‌’ ಟ್ರೇಲರ್‌, ಹಾಡು ಎರಡಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ಚಿತ್ರಕ್ಕೂ ಬೇಡಿಕೆ ಹೆಚ್ಚಾಗಿದೆ. ಸದ್ಯ ಕರ್ನಾಟಕದ ‌ ಲ್ಲಿ ಸುಮಾರು ಮೂರೂವರೆ ದಶಕಗಳ ‌ ವಿತರಣೆಯ ಅನುಭವವಿರುವ “ಅಭಿಜಿತ್‌ ಎಂಟರ್‌ಪ್ರೈಸಸ್‌’ ಸಂಸ್ಥೆ ʼಓಲ್ಡ್‌ ಮಾಂಕ್‌’ ಚಿತ್ರದಕರ್ನಾಟಕ ಔಟ್‌ ರೇಟ್‌ ರೈಟ್ಸ್‌ ಪಡೆದುಕೊಂಡಿದೆ.

“ಹಿಂದಿಯ ಇರೋಸ್‌ ಮತ್ತು ಎಎ ಪಿಕ cರ್(ಅನಿಲ್‌ ತದಾನಿ) ಸಂಸ್ಥೆಗಳ “ತನು ವೆಡ್ಸ್‌ ಮನು’, “ಗಲ್ಲಿ ಭಾಯ್‌’, “ತಾನಾಜಿ’, “ಕಬೀರ್‌ ಸಿಂಗ್‌’, “ಚಂಡೀಗರ್‌ ಕರೇ ಆಶಿಕಿ’ ಹೀಗೆ ಹಲವು ಸೂಪರ್‌ ಹಿಟ್‌ ಸಿನಿಮಾಗಳ ಹಂಚಿಕೆದಾರರಾಗಿ ಗುರುತಿಸಿಕೊಂಡಿರುವ “ಅಭಿಜಿತ್‌ ಎಂಟರ್‌ ಪ್ರೈಸಸ್‌’ ಸಂಸ್ಥೆ “ಓಲ್ಡ್‌ ಮಾಂಕ್‌’ ಟ್ರೇಲರ್‌ ನೋಡಿ ಸಿನಿಮಾದ ಔಟ್‌ ರೇಟ್‌ ರೈಟ್ಸ್‌ ಪಡೆದುಕೊಂಡಿತು. ದೊಡ್ಡ ಮೊತ್ತಕ್ಕೆ ಸಿನಿಮಾದ ರೈಟ್ಸ್‌ ಸೇಲ್‌ ಆಗಿರುವುದರಿಂದ, ನಿರ್ಮಾಪಕರು ಖುಷಿಯಾಗಿದ್ದಾರೆ.

ಮೊದಲ ಬಾರಿಗೆ ದೊಡ್ಡ ಸಂಸ್ಥೆಯೊಂದು ನಮ್ಮ ಸಿನಿಮಾದಕಂಟೆಂಟ್‌ ನೋಡಿ ಸಿನಿಮಾ ರಿಲೀಸ್‌ ಮಾಡಲು ಮುಂದೆ ಬಂದಿದ್ದು, ಆರಂಭದಲ್ಲಿಯೇ ನಮಗೆ ದೊಡ್ಡ ಸಕ್ಸಸ್‌ ಸಿಕ್ಕಂತಾಗಿದೆ’ ಎನ್ನುವುದು”ಓಲ್ಡ್‌ ಮಾಂಕ್‌’ ನಾಯಕ ಕಂ ನಿರ್ದೇಶಕ ಶ್ರೀನಿ ಮಾತು. ಶೀಘ್ರದಲ್ಲಿಯೇ ಬಿಡುಗಡೆಯಾಗುತ್ತಿರುವ “ಆರ್‌ ಆರ್‌ಆರ್‌’ ಮತ್ತು “83′ ಸಿನಿಮಾಗಳ ಜೊತೆಗೆ “ಓಲ್ಡ್‌ ಮಾಂಕ್‌’ ಥಿಯೇಟರಿಕಲ್‌ ಟ್ರೇಲರ್‌ ಬಿಡುಗಡೆಗೆಯಾಗುತ್ತಿದ್ದು, ಅದಾದ ಬಳಿಕ3 ಮಿನಿ ಟೀಸರ್‌ ಮñು¤ ‌ 3 ಸಾಂಗ್ಸ್‌ ರಿಲೀಸ್‌ ಮಾಡಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.