ಬದುಕ್ಕಿದ್ದಾಗಲೇ ಸತ್ತಿದ್ದೇವೆ ಎಂದು ಪರಿಹಾರ ಪಡೆದಿದ್ದ ಗ್ರಾಮಸ್ಥರು
ಬದುಕ್ಕಿದ್ದಾಗಲೇ ಸತ್ತಿದ್ದೇವೆ ಎಂದು ಪರಿಹಾರ ಪಡೆದಿದ್ದ ಗ್ರಾಮಸ್ಥರು
ಚಿಂದ್ವಾರಾ ಜಿಲ್ಲೆಯ 23ಕ್ಕೂ ಹೆಚ್ಚು ಮಂದಿ ತಾವು ಬದುಕಿದ್ದರೂ ತಮ್ಮ ಸಾವಿನ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿಕೊಂಡು ರಾಜ್ಯ ಸರ್ಕಾರದ ಯೋಜನೆಯಡಿ ಪರಿಹಾರ ಪಡೆದು ವಂಚಿಸಿದ್ದಾರೆ ಎಂದು ಪಟೇಲ್ ತಿಳಿಸಿದ್ದಾರೆ.
ನಕಲಿ ಮರಣ ಪ್ರಮಾಣ ಪತ್ರ ಸೃಜಿಸಿದ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಈ ವಂಚನೆಗೆ ಸಹಕರಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಿಂದ್ವಾರಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇದು ಚಿಂದ್ವಾರಾ ಜಿಲ್ಲೆಯಲ್ಲಿ ಮಾತ್ರ ಇಂತಹ ಪ್ರಕರಣ ಪತ್ತೆಯಾಗಿದ್ದು, ಅದೇ ರೀತಿ ರಾಜ್ಯದ ಹಲವಾರು ಭಾಗಗಳಲ್ಲೂ ಇಂತಹ ಅಪರಾಧ ನಡೆಸುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಇಡಿ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಚಿಂದ್ವಾರಾ ಜಿಲ್ಲೆಯ ಬೋಹ್ನಾಖೇಡಿ ಗ್ರಾಮದ 23 ಗ್ರಾಮಸ್ಥರು ತಮ್ಮ ನಕಲಿ ಮರಣ ಪ್ರಮಾಣ ಪತ್ರ ನೀಡಿ ರಾಜ್ಯ ಸರ್ಕಾರದ ಕೂಲಿ ಕಾರ್ಮಿಕರ ಕಲ್ಯಾಣ ನಿ ಯೋಜನೆಯಡಿ ತಲಾ ಎರಡು ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದರು.
ಆದರೆ, ಜೀವಂತವಾಗಿರುವಾಗಲೆ ಸಾವನ್ನಪ್ಪಿದ್ದಾರೆ ಎಂದು ನಕಲಿ ಮರಣ ಪ್ರಮಾಣ ಪತ್ರ ಸಲ್ಲಿಸಿ ಪರಿಹಾರ ಪಡೆದಿರುವುದು ಮಧ್ಯಪ್ರದೇಶದಲ್ಲಿ ಸಂಚಲನ ಸೃಷ್ಟಿಸಿತ್ತು.