ಕಿರು ಚಿತ್ರ ಪ್ರದರ್ಶನ ಪ್ರಶಸ್ತಿ ವಿತರಣೆ, ಎಂ.ಎ.ಮುಮ್ಮಿಗಟ್ಟಿ

ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಕಿರು ಚಿತ್ರ ಪ್ರದರ್ಶನ ಪ್ರಶಸ್ತಿ ವಿತರಣೆ, ಸಿನಿಮಾಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎ.ಮುಮ್ಮಿಗಟ್ಟಿ ಹೇಳಿದ್ರು. ಧಾರವಾಡದಲ್ಲಿ 9 live ಜೊತೆ ಮಾತನಾಡಿದ ಅವರು, ನವ ಕರ್ನಾಟಕ ಚಲನಚಿತ್ರ ಅಕ್ಯಾಡಮಿ ಧಾರವಾಡ ವತಿಯಿಂದ 2021, ನವೆಂಬರ್ 19ರಿಂದ ಮೂರು ದಿನ ಹೊಟೇಲ್ ಟ್ರಾವೆಲ್ ಇನ್ ಸತ್ತೂರನಲ್ಲಿ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಿರು ಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ವಿತರಣೆ, ಸಿನಿಮಾ ಪ್ರದರ್ಶನ ನಡೆಸಲಾಗುವುದು. ಇನ್ನು ಈ ಚಲನಚಿತ್ರೋತ್ಸವಕ್ಕೆ 25 ಚಲನಚಿತ್ರಗಳು 25 ಕಿರುಚಿತ್ರಗಳು ಭಾಗವಹಿಸಲಿವೆ ಎಂದರು.....