ಶಿವಲಿಂಗೇಗೌಡ ಕಾಂಗ್ರೆಸ್ನವರ ಡಕೋಟಾ ಬಸ್ ಹತ್ತಿದ್ದಾರೆ: ಎಚ್.ಡಿ.ರೇವಣ್ಣ ಲೇವಡಿ
ಹಾಸನ: ಅರಸೀಕೆರೆ ವಿಧಾನಸಭೆ ಕ್ಷೇತ್ರದ ಜೆಡಿಎಸ್ ನ ಮಾಜಿ ಶಾಸಕ ಕೆ.ಎಂ ಶಿವಲಿಂಗೇಗೌಡ ಕಾಂಗ್ರೆಸ್ ಸೇರಿರುವ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಲೇವಡಿ ಮಾಡಿದ್ದಾರೆ.
ಮಂಗಳವಾರ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್ನವರು ನರೇಂದ್ರ ಮೋದಿ ಅವರು ಖಾಲಿ ಮಾಡಿರುವ ತಮ್ಮ ಡಕೋಟಾ ಬಸ್ ಹತ್ತಲಿ ಅಂತಾ ಕಾಯುತ್ತಿದ್ದಾರೆ.
''ಅರಸೀಕೆರೆ ಶಾಸಕರಾಗಿದ್ದ ಶಿವಲಿಂಗೌಡರನ್ನು 15 ವರ್ಷ ಸಾಕಿದ್ದೇನೆ. ಈಗ ಶಿರಸಿಗೆ ಹೋಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನೀನೇ ಸಾಕಿದಾ ಗಿಣಿ ಎಂದು ಅರಸೀಕೆರೆ ಕ್ಷೇತ್ರ ಜನ ಹೇಳುತ್ತಿದ್ದಾರೆ. ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ'' ಎಂದು ರೇವಣ್ಣ ವಾಗ್ದಾಳಿ ನಡೆಸಿದರು.