ಯಶವಂತಪುರ-ಮುರುಡೇಶ್ವರ ನಡುವೆ ವಿಶೇಷ ರೈಲು ಆರಂಭಿಸಲು ತೀರ್ಮಾನ

ಯಶವಂತಪುರ-ಮುರುಡೇಶ್ವರ ನಡುವೆ ವಿಶೇಷ ರೈಲು ಆರಂಭಿಸಲು ತೀರ್ಮಾನ

ಯಶವಂತಪುರ-ಮುರುಡೇಶ್ವರ ನಡುವೆ ಸಾಪ್ತಾಹಿಕ ವಿಶೇಷ ರೈಲು ಆರಂಭಿಸಲು ನೈರುತ್ಯ ರೈಲ್ವೆ ಇಲಾಖೆ ತೀರ್ಮಾನಿಸಿದೆ. ಡಿ. 10 ರಿಂದ ಜ.28ರವರೆಗೆ ಯಶವಂತಪುರ ನಿಲ್ದಾಣದಿಂದ ಪ್ರತಿ ಶನಿವಾರ ರಾತ್ರಿ 11.55 ಕ್ಕೆ ಈ ರೈಲು ಹೊರಡಲಿದ್ದು ಮರುದಿನ ಮಧ್ಯಾಹ್ನ 12.55 ಕ್ಕೆ ಮುರುಡೇಶ್ವರ ತಲುಪಲಿದೆ. ಅದೇ ರೀತಿ ಡಿ.11 ರಿಂದ ಜ.29ರವರೆಗೆ ಮುರುಡೇಶ್ವರ ನಿಲ್ದಾಣದಿಂದ ಪ್ರತಿ ಭಾನುವಾರ ಮಧ್ಯಾಹ್ನ 1.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 4.00 ಗಂಟೆಗೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ.