ಶ್ರದ್ಧಾ ವಾಕರ್ ಹತ್ಯೆ ಕೇಸ್; ಅಫ್ತಾಬ್ ಗೆ ಜೈಲು ಅವಧಿ ವಿಸ್ತರಣೆ

ನವದೆಹಲಿ: ಮುಂಬೈ ಮೂಲದ ಯುವತಿ ಶ್ರದ್ಧಾವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆ ಸಾಕೇತ್ ಜಿಲ್ಲಾ ನ್ಯಾಯಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ 14 ದಿನಗಳಿಗೆ ನ್ಯಾಯಂಗ ಬಂಧನವನ್ನು ವಿಸ್ತರಣೆ ಮಾಡಿ ಆದೇಶ ನೀಡಿದೆ.