ಮೆಟ್ರೋದಲ್ಲಿ QR ಕೋಡ್‌ ಟಿಕೆಟ್‌ ವ್ಯವಸ್ಥೆ; ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ

ಮೆಟ್ರೋದಲ್ಲಿ QR ಕೋಡ್‌ ಟಿಕೆಟ್‌ ವ್ಯವಸ್ಥೆ; ಸಾರ್ವಜನಿಕರಿಂದ ಭರ್ಜರಿ ಸ್ಪಂದನೆ

ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಕಾರ್ಪೊರೇಷನ್‌ ಲಿಮಿಟೆಡ್‌ (QR ಕೋಡ್‌) ಟಿಕೆಟ್‌ ವ್ಯವಸ್ಥೆ ಕಲ್ಪಿಸಿದ ಬೆನ್ನಲ್ಲೇ ಸಾರ್ವಜನಿಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಯೂಆರ್‌ ಟಿಕೆಟ್‌ ಪಡೆದು ನವೆಂಬರ್‌ ತಿಂಗಳಿನಲ್ಲಿ 2.1 ಲಕ್ಷ ಜನರು ಪ್ರಯಾಣಿಸಿದ್ದಾರೆ. ನ.1 ರಂದು ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. BMRCL ಪ್ರಕಾರ, 4ನೇ ವಾರದಲ್ಲಿ ಕ್ರಮವಾಗಿ 6,365, 9,070 & 10,100 ಪ್ರಯಾಣಿಕರು QR ಕೋಡ್‌ ಬಳಸಿ ಪ್ರಯಾಣಿಸಿದ್ದಾರೆ.