ಸಿಐಡಿಗೆ ಹೆಗಲಿಗೆ ಹೊನ್ನಾಳಿ ಚಂದ್ರಶೇಖರ್ ಸಾವಿನ ಪ್ರಕರಣ
ಬೆಂಗಳೂರು: ಹೊನ್ನಾಳಿ ಚಂದ್ರಶೇಖರ್ ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಹೊನ್ನಾಳಿ ಚಂದ್ರಶೇಖರ್ ಸಾವಿಗೆ ಸಂಬಂಧಪಟ್ಟಂತೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಸಿಎಂ ನಾಳೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಹೊನ್ನಾಳಿ ಚಂದ್ರಶೇಖರ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ : 'ಡಯಾಟಮ್ ಪರೀಕ್ಷೆ'ಯಲ್ಲಿ ಬಯಲಾಗಿದ್ದು ಏನು ಗೊತ್ತಾ..?
ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾದ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ನಡುವೆ ಡಯಾಟಮ್ ವರದಿ ಪೊಲೀಸರ ಕೈ ಸೇರಿದೆ.
ವರದಿಯಲ್ಲಿ ಚಂದ್ರು ಸಾವು ಸಜಜ ಎಂದು ಡಯಾಟಮ್ ಪರೀಕ್ಷೆ ವರದಿ ನೀಡಿದೆ. ಶ್ವಾಸಕೋಶದ ಒಳಗೆ ನೀರು ಇರುವುದನ್ನು ಖಚಿತಪಡಿಸಿದೆ. ಶ್ವಾಸಕೋಶದ ಒಳಗೆ ನೀರು ಸೇರಿದರೆ ಚಂದ್ರು ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಂದ್ರು ಸಾವಿನ ಪ್ರಕರಣ ಹತ್ತು ಹಲವು ಅನುಮಾನಗಳಿಗೆ ಕಾರಣವಾದ ಬೆನ್ನಲ್ಲೇ ವಿಧಿ ವಿಜ್ಞಾನ ತಂಡ ಹಾಗೂ ವೈದ್ಯರ ತಂಡವು ಡಯಾಟಮ್ ಪರೀಕ್ಷೆಗೆ ಮುಂದಾಗಿತ್ತು. . ಕಾರು ನಾಲೆಗೆ ಬೀಳುವ ಮುನ್ನ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಅಥವಾ ನಾಲೆಗೆ ಕಾರು ಬಿದ್ದ ಬಳಿಕವೇ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಡಯಾಟಮ್ ಪರೀಕ್ಷೆ ಮೊರೆ ಹೋಗಲಾಗಿತ್ತು, ಇದೀಗ ಡಯಾಟಮ್ ವರದಿ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ.
ಫ್ಲೋರೆನ್ಸಿಕ್ ಮೆಡಿಸಿನ್ ತಂಡದಿಂದ ಡಯಾಟಮ್ ಪರೀಕ್ಷೆ ನಡೆಸಿದ್ದು, ಈ ಮೂಲಕ ಶ್ವಾಸಕೋಶವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಚಂದ್ರು ಕಾರಿನ ಸಮೇತ ನೀರಿಗೆ ಬಿದ್ದು ಮೃತಪಟ್ಟಿದ್ದರೆ ಅವರ ಶ್ವಾಸಕೋಶದ ಒಳಗೆ ನೀರು ತುಂಬಿಕೊಳ್ಳುತ್ತದೆ, ನೀರಿನಲ್ಲಿದ್ದ ಕಾರಣ ಶವ ಕೊಳೆತು ಶ್ವಾಸಕೋಶದಲ್ಲಿರುವ ನೀರು ಒಂದು ವೇಳೆ ಹೊರಗೆ ಹೋದರೂ ಕಲ್ಮಶವು ಅಲ್ಲಿಯೇ ಉಳಿದಿರುತ್ತದೆ, ವರದಿಯಲ್ಲಿ ಚಂದ್ಯ ಸಾವು ಸಜಜ ಎಂದು ಡಯಾಟಮ್ ಪರೀಕ್ಷೆ ವರದಿ ನೀಡಿದ್ದು, ಶ್ವಾಸಕೋಶದ ಒಳಗೆ ನೀರು ಇರುವುದನ್ನು ಖಚಿತಪಡಿಸಿದೆ ಎನ್ನಲಾಗಿದೆ. ಸದ್ಯ, ಪೊಲೀಸರು ಎಫ್ ಎಸ್ ಎಲ್ ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದು, ಈ ವರದಿ ಬಂದ ನಂತರ ಪೊಲೀಸರು ಸಹಜ ಸಾವೋ..ಅಸಹಜ ಸಾವೋ ಎಂದು ಸ್ಪಷ್ಟನೆ ನೀಡಲಿದ್ದಾರೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ಕೊಳೆತ ಸ್ಥಿತಿಯಲ್ಲಿ ನಾಲೆಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಎಂದು ರೇಣುಕಾಚಾರ್ಯ ಹಾಗೂ ಮೃತ ಚಂದ್ರು ತಂದೆ ರಮೇಶ್ ಗಂಭೀರವಾಗಿ ಆರೋಪಿಸಿ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೂ, ನನ್ನ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಮೃತ ಚಂದ್ರಶೇಖರ್ ತಂದೆ ರಮೇಶ್ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ರಮೇಶ್ ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು. ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ. ನನ್ನ ಮಗನಿಗೆ ಚಿತ್ರಹಿಂಸೆ ಕೊಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗನ ಕೊಲೆಗೆ ಮೊದಲೇ ಸಂಚು ರೂಪಿಸಲಾಗಿತ್ತು, ನನ್ನ ಮಗನದ್ದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.