ಎಲೆಕ್ಟ್ರಿಕ್ ಸ್ಕೂಟರ್ ಕೊಡಿಸುವದಾಗಿ ಆನ್ಲೈನ್ ವಂಚನೆ

ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ ಕೊಡಿಸುವುದಾಗಿ ಹುಬ್ಬಳ್ಳಿಯ ಸುರೇಶ್ ಕುಮಾರ್ ಎಂಬುವವರಿಗೆ ಅಪರಿಚಿತ ವ್ಯಕ್ತಿಗಳು ಆನ್ಲೈನ್ ವಂಚನೆ ಮಾಡಿದ್ದಾರೆ. ಸುರೇಶ್ ಕುಮಾರ್ಗೆ ಆನ್ಲೈನ್ ವಂಚಕರು ಸುಮಾರು ಒಂದು ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. ಇನ್ನು ಸುರೇಶ್ ಕುಮಾರ್ 499 ರೂಪಾಯಿ ತುಂಬಿ ಕೋಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದ್ದರು. ಅದೇ ದಿನ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಮಾತನಾಡಿದ್ದರು. ಡಿಸ್ಕೌಂಟ್ ಕೊಡಿಸುವುದಾಗಿ ಹೇಳಿ ವಿವಿಧ ಶುಲ್ಕದ ಹೆಸರಲ್ಲಿ ಒಂದು ಲಕ್ಷ ರೂಪಾಯಿ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.