ಮಾದಕವಸ್ತು ಸೇವನೆ: ವಿಮಾನ ಸಿಬ್ಬಂದಿಗೆ ಪರೀಕ್ಷೆ ಕಡ್ಡಾಯ

ನವದೆಹಲಿ: ದೇಶದಲ್ಲಿ ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ, ಪೈಲಟ್‌ಗಳು ಇನ್ನು ಮುಂದೆ ಮಾದಕ ವಸ್ತು ಸೇವನೆ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ.
ವಿಮಾನಯಾನದ ಸುರಕ್ಷತೆ, ಸಿಬ್ಬಂದಿ ಮಾದಕವಸ್ತು ವ್ಯಸನಿಗಳಲ್ಲ ಎಂಬುದರ ಖಾತರಿಗೆ ಈ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಕರಡು ನಿಯಮಗಳನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶ ನಾಲಯ ಆಗಸ್ಟ್ 25ರಂದು ಪ್ರಕಟಿಸಿದೆ. ಭಾವಿ ಪೈಲಟ್‌ಗಳು ಕೂಡಾ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಲಿದೆ.
ಆಯಂಪೆಟಮೈನ್, ಕ್ಯಾನಬಿಸ್, ಕೊಕೈನ್, ಒಪಿಯೊಡ್ಸ್, ಬಾರ್ಬಿ ಟುರೇಟ್ಸ್ ಹೆಸರಿನ ಮಾದಕ ವಸ್ತು ಸೇವಿಸಿದ್ದಾರೆಯೇ, ವ್ಯಸನವಿ ದೆಯೇ ಎಂದು ತಿಳಿಯುವುದು ಇದರ ಉದ್ದೇಶ. ಸದ್ಯ, ಪೈಲಟ್ ಹಾಗೂ ವಿಮಾನದ ಪ್ರಮುಖ ಸಿಬ್ಬಂದಿಗಳು ಮದ್ಯಪಾನ ಮಾಡಿದ್ದಾರೆಯೇ ಎಂಬುದರ ಪರೀಕ್ಷೆ ನಡೆಯಲಿದೆ.