158 ದಿನಗಳ ಬಳಿಕ ಕೊವೀಡ್ ಸೋಂಕಿತೆ ಡಿಸ್ಚಾರ್ಜ್ | Koppal |
158 ದಿನಗಳ ಬಳಿಕ ಕೊವೀಡ್ ಸೋಂಕಿತೆ ಡಿಸ್ಚಾರ್ಜ್ ಆಗಿರುವ ಅಪರೂಪದ ಘಟನೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಬೋದೂರು ಗ್ರಾಮದ ಗೀತಾ (45) ಡಿಶ್ಚಾರ್ಜ್ ಆದ ಸೋಂಕಿತೆ. ಜುಲೈ 13 ರಂದು ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸೋಂಕಿತೆ 104 ದಿನ ವೆಂಟಿಲೇಟರ್ ನಲ್ಲಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ್ದ ವೇಳೆ ಪ್ರತಿಶತ 90ರಷ್ಟು ಲಂಗ್ಸ್ ಡ್ಯಾಮೇಜ್ ಆಗಿದ್ದವು. ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ.