ಕಾಂಗ್ರೆಸ್ ಸೇರುವುದಿಲ್ಲ, ಬೆಂಬಲಿಸುತ್ತೇನೆ: ಎಚ್. ವಿಶ್ವನಾಥ್

ಬೆಂಗಳೂರು: ತಾಂತ್ರಿಕ ಕಾರಣದಿಂದ ನಾನು ಕಾಂಗ್ರೆಸ್ ಸೇರುವು ದಿಲ್ಲ. ಆದರೆ ಆ ಪಕ್ಷವನ್ನು ಬೆಂಬಲಿ ಸುತ್ತೇನೆ ಎಂದು ಬಿಜೆಪಿಯ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯದಲ್ಲೇ ನಾನು ಕಾಂಗ್ರೆಸ್ ಬೆಂಬಲಿಸುವ ಘೋಷಣೆ ಮಾಡಲಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಬೆಂಬಲಿಸಲು ಯಾವುದೇ ಷರತ್ತು ವಿಧಿಸಿಲ್ಲ. ನನ್ನ ಮನೆಗೆ ಹೋಗಲು ನಾನು ಷರತ್ತು ವಿಧಿಸುವ ಅಗತ್ಯವಿಲ್ಲ. ಬಿಜೆಪಿಯವರು ನನ್ನನ್ನು ಇರಿ ಅಂತಲೂ ಹೇಳಿಲ್ಲ, ಹೋಗಿ ಅಂತಲೂ ಇಲ್ಲ. ನಾನು ಸ್ವತಂತ್ರ ವ್ಯಕ್ತಿ ಎಂದು ಹೇಳಿದರು.
ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಜತೆ ಈ ಬಗ್ಗೆ ಚರ್ಚಿಸಿದ್ದೇನೆ ಎಂದರು.