ಗೋಧಿ ಹಿಟ್ಟಿನ ದರ ಗಣನೀಯ ಹೆಚ್ಚಳ
ಚಿಲ್ಲರೆ ಮಾರಾಟದ ಗೋಧಿ ಹಿಟ್ಟಿನ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಒಂದು ವರ್ಷದ ಅವಧಿಯಲ್ಲಿ ಗೋಧಿ ಹಿಟ್ಟಿನ ಬೆಲೆ ಶೇಕಡಾ 17ರಷ್ಟು ಏರಿಕೆಯಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಲಭ್ಯತೆ ಕಡಿಮಯಾಗಿರುವುದೇ ದರ ಹೆಚ್ಚಳಕ್ಕೆ ಕಾರಣ ಎಂದು ವರ್ತಕರು ಮತ್ತು ಮಿಲ್ಗಳ ಮೂಲಗಳು ತಿಳಿಸಿವೆ. ಸದ್ಯ ಒಂದು ಕೆಜಿ ಗೋಧಿ ಹಿಟ್ಟಿನ ದರ 36.98 ರೂ. ಆಗಿದ್ದು, ಅಕ್ಕಿ ದರದ ಸನಿಹಕ್ಕೆ ಬಂದಿದೆ ಎಂಬುದು ಗ್ರಾಹಕ ವ್ಯವಹಾರಗಳ ಸಚಿವಾಲಯದ ದತ್ತಾಂಶಗಳಿಂದ ತಿಳಿದುಬಂದಿದೆ.