ಅವರಿಗಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡೋಣ: ಬಹಿರಂಗ ಸಭೆಯಲ್ಲಿ ರಮೇಶ್ ಜಾರಕಿಹೊಳಿ

ಅವರಿಗಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡೋಣ: ಬಹಿರಂಗ ಸಭೆಯಲ್ಲಿ ರಮೇಶ್ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸಲೇಬೇಕು. ಇದಕ್ಕಾಗಿ ಅವರು 3 ಸಾವಿರ ರೂ. ಗಿಫ್ಟ್ ಕೊಟ್ಟರೆ ನಾವು 6 ಸಾವಿರ ರೂ. ಗಿಫ್ಟ್ ಕೊಡುತ್ತೇವೆ. ಅವರು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡುತ್ತೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಸುಳೇಬಾವಿಯಲ್ಲಿ ಶುಕ್ರವಾರ ಸಂಜೆ ನಡೆದ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ನಾವು ಮೊದಲು ಸಂಘಟನೆ ಮಾಡಿ ನಂತರ ಗಿಫ್ಟ್ ಕೊಡುತ್ತೇವೆ. ಅವರು 3 ಸಾವಿರ ರೂ. ಗಿಫ್ಟ್ ಕೊಟ್ಟರೆ, ನಾವು 6 ಸಾವಿರದ್ದು ಕೊಟ್ಟರೆ ಮಾತ್ರ ನಮಗೆ ಓಟ್ ಕೊಡಿ ಎಂದು ಹೇಳಿದರು.

ಅವರು ಕೊಡುವ ಗಿಫ್ಟನ್ನು ಕಡೆಗಣಿಸಿ ಇಲ್ಲಿ ಜನರು ಸಮಾವೇಶಕ್ಕೆ ಬಂದಿದ್ದಾರೆ. ಇಂತವರನ್ನು ಪಡೆದ ನಾನೇ ಧನ್ಯ ಎಂದ ರಮೇಶ ಜಾರಕಿಹೊಳಿ, ನಾನು ಮಾಜಿ ಆದ ನಂತರ ಅವರ ನಿಜವಾದ ಬಣ್ಣ ಗೊತ್ತಾಯಿತು. ನಾನು ಮಾಜಿ ಆಗದಿದ್ದರೆ ಅವರ ಗುಣ ಗೊತ್ತಾಗುತ್ತಿರಲಿಲ್ಲ, ಮಾಜಿ ಆದರೆ ನಾನು ಮನೆಗೆ ಹೋಗುತ್ತೇನೆ ಎಂದು ತಿಳಿದಿದ್ದರು. ಆದರೆ ಇದು ಜಾರಕಿಹೊಳಿ ಕುಟುಂಬ, ಎಂದಿಗೂ ಮನೆಗೆ ಹೋಗುವುದಿಲ್ಲ ಎಂದರು.