ಪುಸ್ತಕ, ಗ್ರಂಥ ಓದುವ ಅಭ್ಯಾಸ ರೂಪಿಸಿಕೊಳ್ಳಲು ವಿಜಯಲಕ್ಷ್ಮಿ ಗದ್ವಾಲ್ ಸಲಹೆ |Hubli|

ಬಸ್ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಬಿಡುವಿನ ವೇಳೆಯಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಹುಬ್ಬಳ್ಳಿ ನಗರದ ಗೋಕುಲ ಹೊಸ ಬಸ್ ನಿಲ್ದಾಣದಲ್ಲಿ ಆರಂಭಿಸಿರುವ ಗ್ರಂಥಾಲಯಕ್ಕೆ ಇನ್ನರ್ ವ್ಹೀಲ್ ಪಶ್ಚಿಮ ಶಾಖೆ ಅಧ್ಯಕ್ಷೆ ವಿಜಯಲಕ್ಷ್ಮಿ ಗದ್ವಾಲ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಇನ್ನರ್ ವೀಲ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ವತಿಯಿಂದ ಬುಕ್ ರ್ಯಾಕ್, ಪುಸ್ತಕಗಳು ಹಾಗೂ ಮೊಬೈಲ್ ಚಾಜಿರ್ಂಗ್ ಸ್ಟ್ಯಾಂಡ್ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ ಪ್ರಯಾಣಿಕರು ಈ ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಒದುವ ಮೂಲಕ ಓದುವ ಅಭರುಚಿ ಬೆಳೆಸಿಕೊಳ್ಳಲು ಸಲಹೆ ನೀಡಿದರು.ಈ ಸಂದರ್ಭದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಕಾರ್ಯದರ್ಶಿ ಪೂರ್ಣಿಮಾ ಕಾಡಂಬಿ ಹಾಗೂ ಖಜಾಂಚಿ ಭಾನುಮತಿ ಬ್ಯಾಡಗಿ,ಅಧಿಕಾರಿಗಳಾದ ಎಸ್.ಎಸ್. ಮುಜುಂದಾರ, ಪ್ರವೀಣ ಈಡೂರ,ಅಶೋಕ ಡೆಂಗಿ, ಸದಾನಂದ ಒಡೆಯರ, ಸುನಿಲ ವಾಡೆಕರ, ನಾಗಮಣಿ, ರೋಹಿಣಿ,ಘಟಕ ವ್ಯವಸ್ಥಾಪಕರಾದ ಬಸಪ್ಪ ಪೂಜಾರಿ, ವೈ.ಎಂ.ಶಿವರೆಡ್ಡಿ, ದೇವಕ್ಕ ನಾಯ್ಕ ಮತ್ತಿತರರು ಇದ್ದರು