ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಮೇಲ್ಛಾವಣಿ ಕುಸಿತ, ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ
ಮೈಸೂರು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವಂತ ಮಹಾರಾಣಿ ಕಾಲೇಜಿನ ಮೇಲ್ಛಾವಣಿ ಕುಸಿತಗೊಂಡಿದೆ. ಕಾಲೇಜಿನ ಮೇಲ್ಛಾವಣಿ ಕುಸಿತದ ಸುಳಿವು ಸಿಕ್ಕೊಡಣೆ ಸಿಬ್ಬಂದಿಗಳು ಹೊರ ಓಡಿ ಬಂದ ಕಾರಣ, ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದಂತೆ ಆಗಿದೆ.
ಇಂದು ಬೆಳಿಗ್ಗೆ ಮೈಸೂರಿನ ಮಹಾರಾಣಿ ಕಾಲೇಜಿನ ಲ್ಯಾಬ್ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡ ಕುಸಿಯೋ ಸುಳಿವು ಸಿಕ್ಕ ತಕ್ಷಣ ಅಲ್ಲಿದ್ದಂತ ಸಿಬ್ಬಂದಿಗಳು ಹೊರ ಓಡಿ ಬಂದ ಕಾರಣ ಯಾವುದೇ ಸಾವುನೋವು ಸಂಭವಿಸಿಲ್ಲ.
ಕಟ್ಟಡ ಕುಸಿತದ ಸುದ್ದಿ ತಿಳಿದು ರಕ್ಷಣಾಕಾರ್ಯಾಚರಣೆಗಾಗಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣವೇ ಆಗಮಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮಹಾರಾಣಿ ಕಾಲೇಜಿನ ಲ್ಯಾಬ್ ಕಟ್ಟಡದ ಮೇಲ್ಛಾವಣಿ ಕುಸಿಯುತ್ತಿರುವಂತ ದೃಶ್ಯಾವಳಿ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.