ನದಿಯಲ್ಲಿ ಮುಳುಗಿದ್ದ ಬಾಲಕ ಮೃತದೇಹವನ್ನು ರಕ್ಷಣಾ ತಂಡಕ್ಕೆ ಹಿಂದಿರುಗಿಸಿದ ʻಮೊಸಳೆʼ

ನದಿಯಲ್ಲಿ ಮುಳುಗಿದ್ದ ಬಾಲಕ ಮೃತದೇಹವನ್ನು ರಕ್ಷಣಾ ತಂಡಕ್ಕೆ ಹಿಂದಿರುಗಿಸಿದ ʻಮೊಸಳೆʼ

ಇಂಡೋನೇಷ್ಯಾ: ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕನ ಮೃತದೇಹವನ್ನು ಮೊಸಳೆಯೊಂದು ತನ್ನ ಬೆನ್ನ ಮೇಲೆ ಹೊತ್ತು ನದಿಯ ದಡಕ್ಕೆ ಹೊತ್ತೊಯ್ಯುತ್ತಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಇಂಡೋನೇಷ್ಯಾದ ಮುವಾರಾ ಜಾವಾ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಮುರಾ ಜಾವಾದಲ್ಲಿ ತನ್ನ ಮನೆಯ ಹಿಂದೆ ಏಕಾಂಗಿಯಾಗಿ ಆಟವಾಡುತ್ತಿದ್ದಾಗ ಮಹಾಕಾಮ್ ನದಿಯಲ್ಲಿ 4 ವರ್ಷದ ಪುಟ್ಟ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿತ್ತು.

ಅವನ ಪತ್ತೆಗಾಗಿ ರಕ್ಷಣಾ ತಂಡಗಳು ಹಾಗೂ ಆತನ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಬಾಲಕ ಮೃತದೇಹವನ್ನು ಮೊಸಳೆಯೊಂದು ತನ್ನ ಬೆನ್ನ ಮೇಲೆ ಹೊತ್ತು ನದಿಯ ದಡದತ್ತ ಹೋಗುತ್ತಿರುವುದನ್ನು ಕಂಡ ರಕ್ಷಣಾ ತಂಡ ಮೃತದೇಹವನ್ನು ವಶಪಡಿಸಿಕೊಂಡಿದೆ. ಇದರ ವಿಡಿಯೋ ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.