ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರಗೆ ಎಸಿಬಿ ರೆಡ್
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರಿ ಕೆಲಸ ಕಾರ್ಯಗಳಿಗೆ ಬರುವಂತ ಜನರಿಗೆ ಹಣದ ಬೇಡಿಕೆ ಇಡುತ್ತಿದ್ದ ಎಂಬ ದೂರಿನ ಮೇರೆಗೆ ಇಲಾಖೆಯ ಮ್ಯಾನೇಜರ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮ್ಯಾನೇಜರ್ ಶಿವಶಂಕರ್ ಹಿರೇಮಠ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಸೇರಿದಂತೆ ಉಳವಿ ಚೆನ್ನಬಸವೇಶ್ವರ ನಗರದಲ್ಲಿರುವ ಮನೆ ಮೇಲೂ ಎಸಿಬಿ ದಾಳಿ ಮಾಡಿದ್ದಾರೆ. ಗದಗ, ಧಾರವಾಡ ಎಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು, ದಾಳಿಯ ವೇಳೆಯಲ್ಲಿ ಶಿವಶಂಕರ ಹಿರೇಮಠ ಮನೆಯಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಹಣ, ಕಚೇರಿಗೆ ತಂದ ಕಾರಿನಲ್ಲಿ 1 ಲಕ್ಷ 25 ಸಾವಿರ ಒಟ್ಟು 5 ಲಕ್ಷಕ್ಕೂ ಅಧಿಕ ನಗದು ಹಣವನ್ನು ಎಸಿಬಿ ಅವರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ತಡ ರಾತ್ರಿಯು ಕೂಡಾ ಮ್ಯಾನೇಜರ್ ಶಿವಶಂಕರ್ ಮನೆ, ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಬೀಡು ಬಿಟ್ಟಿದ್ದು ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ.