ಅಪ್ರಾಪ್ತ ವಯಸ್ಕರಿಗೆ 'ಬಾ ಬಾ' ಎಂದು ಹೇಳುವುದು ಲೈಂಗಿಕ ಕಿರುಕುಳ: ಮುಂಬೈ ಕೋರ್ಟ್

ಅಪ್ರಾಪ್ತ ವಯಸ್ಕರಿಗೆ 'ಬಾ ಬಾ' ಎಂದು ಹೇಳುವುದು ಲೈಂಗಿಕ ಕಿರುಕುಳ: ಮುಂಬೈ ಕೋರ್ಟ್

ಮುಂಬೈ: ಬಾಲಕಿಯ ಮೇಲೆ ನಿರಾಸಕ್ತಿಯ ಸ್ಪಷ್ಟ ಸೂಚನೆಯ ಹೊರತಾಗಿಯೂ ಬಾಲಕಿಯನ್ನು ಹಿಂಬಾಲಿಸುವುದು ಮತ್ತು ಆಕೆಗೆ ಪದೇ ಪದೇ 'ಬಾ ಬಾ' ಎಂದು ಹೇಳುವುದು ಲೈಂಗಿಕ ಕಿರುಕುಳ ಎಂದು ಗಮನಿಸಿದ ದಿಂಡೋಶಿಯ ಸೆಷನ್ಸ್ ನ್ಯಾಯಾಲಯವು ಮಕ್ಕಳ ರಕ್ಷಣೆಯ ನಿಬಂಧನೆಯ ಅಡಿಯಲ್ಲಿ 32 ವರ್ಷದ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ನೀಡಿದೆ.

ಈ ಘಟನೆಯು ಸೆಪ್ಟೆಂಬರ್ 2015 ರಲ್ಲಿ ನಡೆದಿದ್ದು, ಬಾಲಕಿ 15 ವರ್ಷದ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಳು. ನ್ಯಾಯಾಲಯದ ಮುಂದೆ ಹಾಜರಾಗಿ, ತಾನು ನಡೆದುಕೊಂಡು ಫ್ರೆಂಚ್ ಟ್ಯೂಷನ್‌ಗೆ ಹೋಗುತ್ತಿದ್ದಾಗ, ಆ ವ್ಯಕ್ತಿ ತನ್ನ ಬೈಸಿಕಲ್‌ನಲ್ಲಿ ತನ್ನನ್ನು ಹಿಂಬಾಲಿಸಿ ಪದೇ ಪದೇ 'ಆಜಾ ಆಜಾ' ಎಂದು ಹೇಳಿದ್ದನೆಂದು ತಿಳಿಸಿದಾಳೇ.

ಇನ್ನೂ ಕೆಲವು ದಿನಗಳವರೆಗೆ ಆತ ಅದೇ ಕೆಲಸವನ್ನು ಮುಂದುವರೆಸಿದ. ಮೊದಲ ದಿನ, ಅವಳು ಬೀದಿಯಲ್ಲಿದ್ದ ಪುರುಷರಿಂದ ಸಹಾಯ ಪಡೆಯಲು ಪ್ರಯತ್ನಿಸಿದ್ದಾಳೆ. ಸ್ತಳೀಯ ಜನತೆ ಆತನನ್ನು ಬೆನ್ನಟ್ಟಲು ಪ್ರಯತ್ನಿಸಿದರು ಆದರೆ ಅವನು ತನ್ನ ಬೈಸಿಕಲ್ನಲ್ಲಿ ಪರಾರಿಯಾಗಿದ್ದನು ಎನ್ನಲಾಗಿದೆ. ಘಟನೆಯ ಬಗ್ಗೆ ತನ್ನ ಟ್ಯೂಷನ್ ಟೀಚರ್ ಹಾಗೂ ಪೋಷಕರಿಗೆ ಹೇಳಿದ್ದಳು. ತಾಯಿ ಪೊಲೀಸರಿಗೆ ದೂರು ನೀಡಿ ದೂರು ದಾಖಲಿಸಿದ್ದರು.