ಹೆಂಡ್ತಿಗೆ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಪತಿರಾಯ ನೇಣಿಗೆ ಶರಣು

ಹೆಂಡ್ತಿಗೆ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡುತ್ತಿದ್ದ ಪತಿರಾಯ ನೇಣಿಗೆ ಶರಣು

ನೇಕಲ್‌: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬನ್ನೇರುಘಟ್ಟ ಬಳಿ ಶ್ಯಾನಭೋಗನಹಳ್ಳಿಯಲ್ಲಿ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಹಲ್ಲೆ ನಡೆಸಿ ತವರು ಮನೆಗೆ ಕಳುಹಿಸಿದ್ದು, ಆತ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

35 ವರ್ಷದ ರಾಜೇಶ್‌ ಮೃತ ವ್ಯಕ್ತಿ.ಈತ ಗಣೇಶ್‌ ಮೂರ್ತಿ ತಯಾರಿಕೆ ಕೆಲಸ ಮಾಡುತ್ತಿದ್ದನು. ಹತ್ತು ವರ್ಷಗಳ ಹಿಂದೆ ಪುಟ್ಟೇನಹಳ್ಳಿ ವಾಸಿ ಲಾವಣ್ಯ ಜೊತೆ ಇವನಿಗೆ ಮದುವೆಯಾಗಿತ್ತು. ಆದರೆ ಇತ್ತೀಚೆಗೆ ಮದ್ಯವೆಸನಿಯಾಗಿರುವ ರಾಜೇಶ್‌ ಹೆಂಡ್ತಿಗೆ ಪದೇ ಪದೇ ತವರು ಮನೆಯಿಂದ ಹಣ ತರುವಂತೆ ಹೇಳುತ್ತಿದ್ದನು.

ಈ ವೇಳೆ ಪತ್ನಿಗೆ ಹಲ್ಲೆ ಕೂಡ ಮಾಡಿ ವಾರದ ಹಿಂದೆ ತವರು ಮನೆಗೆ ಕಳುಹಿಸಿದ್ದ. ಆದರೆ ಮನೆಯಲ್ಲಿ ಯಾರು ಇಲ್ಲದೆ ವೇಳೆ ನಿನ್ನೆ ಫ್ಯಾನ್‌ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ.