ಕೇಂದ್ರ ಸರ್ಕಾರದ ಬಜೆಟ್ ನಲ್ಲಿ `ಕರ್ನಾಟಕ ರೈಲ್ವೆ ಯೋಜನೆಗೆ ಬಂಪರ್' : ದಾಖಲೆಯ 7,561 ಕೋಟಿ ರೂ. ಅನುದಾನ

ಬೆಂಗಳೂರು : ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಕರ್ನಾಟಕಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಂದಾಜು 7,561 ಕೋಟಿ ರೂ. ದಾಖಲೆ ಪ್ರಮಾಣದ ಅನುದಾನ ನೀಡಲಾಗಿದೆ.
ಕರ್ನಾಟಕ ರೈಲ್ವೆ ಯೋಜನೆಗಳಿಗೆ 2014 ರಲ್ಲಿನ 835 ಕೋಟಿ ರೂ.ಅನುದಾನ ನೀಡಲಾಗಿತ್ತು.
2022ರಲ್ಲಿ ನೈಋತ್ಯ ರೈಲ್ವೆ ಸಾರ್ವಕಾಲಿಕ ಆದಾಯ ದಾಖಲೆ ಬರೆದಿದೆ. ಈ ಅವಧಿಯಲ್ಲಿ 5,680 ಕೋಟಿ ಆದಾಯ ಗಳಿಸಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಆದಾಯ ಗಳಿಕೆಯಲ್ಲಿ 29%ರಷ್ಟು ಹೆಚ್ಚಾಗಿದೆ ಎಂದರು. ಈಗಾಗಲೆ ಘೋಷಣೆಯಾದ ಹೊಸ ಮಾರ್ಗ ಗಳಿಗೆ ಒಟ್ಟಾರೆ 2,423 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ 21,408 ಕೋಟಿ ರು. ದೊರೆತಿದೆ. 865 ಕೋಟಿ ರು.ಗಳನ್ನು ಮುಂದೆ ಘೋಷಣೆಯಾಗುವ ಹೊಸ ಮೀಸಲಿಡಲಾಗುವುದು ಎಂದರು.
ಈ ಬಾರಿ ಅಮೃತ್ ಭಾರತ ಯೋಜನೆಯಡಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಚಾಮರಾಜ ನಗರ, ಹರಿಹರ, ಹಾಸನ, ಶಿವಮೊಗ್ಗ ಸೇರಿ 52 ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕೈಗೊಳ್ಳಲಾಗುವುದು. ಅದರಲ್ಲಿ ಈಗಾಗಲೇ ಯಶವಂತಪುರ ಹಾಗೂ ಬೆಂಗಳೂರು ದಂಡು ರೈಲ್ವೆ ನಿಲ್ದಾಣವನ್ನು ಆದ್ಯತೆ ಮೇರೆಗೆ ಹೈಟೆಕ್ ಮಾಡಲಾಗುತ್ತಿದೆ. ಅತ್ಯಾಧುನಿಕ ಸೌಕರ್ಯ ಹಾಗೂ ತಂತ್ರಜ್ಞಾನಗಳೊಂದಿಗೆ ಈ ನಿಲ್ದಾಣಗಳು ತಲೆ ಎತ್ತಲಿವೆ ಎಂದು ತಿಳಿಸಿದರು.
ಜೋಡಿ ಮಾರ್ಗಕ್ಕಾಗಿ 1,529 ಕೋಟಿ, ವಿದ್ಯುದೀಕರಣಕ್ಕಾಗಿ 2793.3ಕೋಟಿ ಮೀಸಲಿದ್ದು, ಈಗಾಗಲೇ ನೈರುತ್ಯ ವಲಯ ಮಾರ್ಗದಲ್ಲಿ 2,243 ಕಿಮೀ ನಷ್ಟು ವಿದ್ಯುದೀಕರಣ ಪೂರ್ಣಗೊಂಡಿದೆ ಎಂದರು.