ಚಂದ್ರಶೇಖರ್ ಕೊನೆಯ ಬಾರಿಗೆ ಕರೆ ಮಾಡಿದ್ದು ಯಾರಿಗೆ..?

ಚಂದ್ರಶೇಖರ್ ಕೊನೆಯ ಬಾರಿಗೆ ಕರೆ ಮಾಡಿದ್ದು ಯಾರಿಗೆ..?

ಬೆಂಗಳೂರು,ನ.5-ದಾವಣಗೆರೆ ಜಿಲ್ಲೆಯ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್‍ರವರ ಅನುಮಾನಾಸ್ಪದ ಸಾವಿನ ತನಿಖೆ ತೀವ್ರಗೊಂಡಿದ್ದು, ಮೊಬೈಲ್ ಕರೆಗಳ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ.

ತನಿಖೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಕೊಲೆ ಆರೋಪದ ಅನುಮಾನಗಳ ಕುರಿತು ತನಿಖೆ ನಡೆಸುತ್ತಿದೆ. ಮತ್ತೊಂದು ತಂಡ ಮೇಲ್ನೋಟಕ್ಕೆ ಕಂಡುಬಂದ ಅಪಘಾತದ ಸನ್ನಿವೇಶಗಳ ಕುರಿತು ಹಾಗೂ 3ನೇ ತಂಡ ಚಂದ್ರಶೇಖರ್ ಅವರ ಆಪ್ತ ಬಳಗ, ಸ್ನೇಹಿತರು, ಸ್ಥಳೀಯರನ್ನು ವಿಚಾರಣೆಗೊಳಪಡಿಸುತ್ತಿದೆ.

ಘಟನಾ ಸ್ಥಳದಲ್ಲಿ ವಿವಿಜ್ಞಾನಗಳ ಪ್ರಯೋಗಾಲಯದ ತಂಡ ಪರಿಶೀಲನೆ ನಡೆಸುತ್ತಿದ್ದು, ಹಲವು ಮಹತ್ವದ ದಾಖಲೆಗಳನ್ನು ಕಲೆ ಹಾಕಿದೆ.ಕಾರು ನಾಲೆಗೆ ಬೀಳುವ ಮುನ್ನ ಎಷ್ಟು ವೇಗದಲ್ಲಿ ಬರುತ್ತಿತ್ತು, ಒಂದು ವೇಳೆ ಅಪಘಾತವೇ ಆಗಿದ್ದರೆ ಅದಕ್ಕೆ ನಿಖರ ಕಾರಣಗಳೇನು, ಕಾರಿನ ಹಿಡಿತ ತಪ್ಪುವ ಸಾಧ್ಯತೆಗಳು ಹೇಗಿದ್ದವು ಎಂಬ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಎಡಬದಿಯಲ್ಲಿ ಪ್ರಯಾಣಿಸಬೇಕಿದ್ದ ಕಾರು ಬಲ ಭಾಗಕ್ಕೆ ತಿರುಗಿ ಎರಡುಮೂರು ಕಲ್ಲುಗಳಿಗೆ ಡಿಕ್ಕಿ ಹೊಡೆದು ನಂತರ ನಾಲೆಗೆ ಬಿದ್ದಿದೆ.ಸ್ಥಳೀಯ ಮಾಹಿತಿಯ ಪ್ರಕಾರ ಕಾರಿನ ಎಡಭಾಗಕ್ಕೆ ತೀವ್ರ ಹಾನಿಯಾಗಿದೆ. ಟೈರ್‍ಗಳು ಪಂಕ್ಚರ್ ಆಗಿವೆ.

ಏರ ಬ್ಯಾಗ್ ತೆರೆದುಕೊಂಡಿದೆ. ಆದರೆ ಚಂದ್ರಶೇಖರ್ ಅವರು ಹಿಂದಿನ ಸೀಟಿನಲ್ಲಿ ಇರುವುದು ಪತ್ತೆಯಾಗಿದೆ. ಸಾಕಷ್ಟು ಗೊಂದಲಗಳನ್ನು ಹುಟ್ಟಿ ಹಾಕಿರುವ ಈ ಪ್ರಕರಣ ಹೈಪ್ರೊಫೈಲ್ ಕೂಡ ಆಗಿದ್ದು, ಪೊಲೀಸರು ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಿ ತನಿಖೆ ನಡೆ

ಇಂದು ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಅವರೊಂದಿಗೆ ಮಾತನಾಡಿರುವ ಚಂದ್ರಶೇಖರ್‍ನ ದೊಡ್ಡಪ್ಪ ಎಂ.ಪಿ.ರೇಣುಕಾಚಾರ್ಯ ಪೊಲೀಸರ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಂದ್ರು ಅವರು ಕಾರು ಡ್ರೈವಿಂಗ್ ಮಾಡುತ್ತಾ ಇರುವಾಗಲೇ ಫೋನ್ ಬಂದಿದ್ದು, ಮಾತನಾಡುತ್ತಿದ್ದ ವೇಳೆಯಲ್ಲೇ ಫೋನ್ ಸ್ವಿಚ್ ಆಫ್ ಆಗಿದೆ.

ಇದು ಹೇಗೆ ಸಾಧ್ಯ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ. ತಮ್ಮ ಮನೆ ಮಗ ಚಂದ್ರಶೇಖರ್ ಸಾವಿಗೆ ನ್ಯಾಯ ದೊರೆಯಬೇಕು. ಹೀಗಾಗಿ ತನಿಖೆ ಪ್ರಾಮಾಣಿಕವಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.