BIG BREAKING NEWS: ರಾಜ್ಯ ವಿಧಾನಪರಿಷತ್ 25 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್: ಡಿ.10ರಂದು ಚುನಾವಣೆ ನಿಗದಿ

ವರದಿ: ಲೀಲಾವತಿ ವಸಂತ ಬಿ ಈಶ್ವರಗೆರೆ
ಬೆಂಗಳೂರು: ದಿನಾಂಕ 05-01-2022ರಂದು ಕೊನೆಗೊಳ್ಳಲಿರುವಂತ ಕರ್ನಾಟಕ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ದಿನಾಂಕ 10-12-2021ರಂದು ಚುನಾವಣೆ ನಿಗದಿ ಪಡಿಸಲಾಗಿದೆ. ದಿನಾಂಕ 14-12-2021ರಂದು ಚುನಾವಣೆಯ ಮತಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲತಾಂಶ ಪ್ರಕಟಗೊಳ್ಳಲಿದೆ.
ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗವು ( Election Commission of India ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 16-11-2021ರಂದು ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ( Legislative Council Election ) ಸಂಬಂಧ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ದಿನಾಂಕ 23-11-2021 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಕಾರ್ಯ ದಿನಾಂಕ 24-11-2021ರಂದು ನಡೆಸಲಾಗುತ್ತದೆ. ನಾಮಪತ್ರವನ್ನು ವಾಪಾಸ್ ಪಡೆಯಲು ದಿನಾಂಕ 26-11-2021 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.
ಇನ್ನೂ ಪರಿಷತ್ 25 ಸ್ಥಾನಗಳಿಗೆ ದಿನಾಂಕ 10-12-2021ರಂದು ಮತದಾನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಈ ಮತದಾನದ ಮತಎಣಿಕ ಕಾರ್ಯ ದಿನಾಂಕ 14-12-2021ರಂದು ನಡೆಯಲಿದ್ದು, ಅಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ಪ್ರಕ್ರಿಯೆಯು ದಿನಾಂಕ 16-12-2021ರಂದು ಕೊನೆಗೊಳ್ಳಲಿರುವುದಾಗಿ ತಿಳಿಸಿದೆ.
ದಿನಾಂಕ 05-01-2022ರಂದು ಅಂತ್ಯಗೊಳ್ಳಲಿರುವಂತ ಪರಿಷತ್ ಸದಸ್ಯರ ಪಟ್ಟಿ
- ಬೀದರ್ - ವಿಜಯ್ ಸಿಂಗ್
- ಗುಲಬರ್ಗ - ಬಿ.ಜಿ.ಪಾಟೀಲ್
- ಬಿಜಾಪುರ - ಎಸ್ ಆರ್ ಪಾಟೀಲ್, ಸುನೀಲ್ ಗೌಡ ಪಾಟೀಲ್
- ಬೆಳಗಾವಿ - ಮಹಾಂತೇಶ್ ಕವಟಗಿಮಠ, ವಿವೇಕ್ ರಾವ್ ವಸಂತ್ ರಾವ್ ಪಾಟೀಲ್
- ಉತ್ತರ ಕನ್ನಡ - ಗೊಟ್ನೇಕರ್ ಶ್ರೀಕಾಂತ್ ಲಕ್ಷ್ಮಣ್
- ಧಾರವಾಡ - ಪ್ರದೀಪ್ ಶೆಟ್ಟರ್, ಮಾನೆ ಶ್ರೀನಿವಾಸ್
- ರಾಯಚೂರು - ಬಸವರಾಜ್ ಪಾಟೀಲ್ ಇಟಗಿ
- ಬಳ್ಳಾರಿ - ಕೆಸಿ ಕೊಂಡಯ್ಯ
- ಚಿತ್ರದುರ್ಗ - ರಘು ಆಚಾರ್
- ಶಿವಮೊಗ್ಗ - ಆರ್ ಪ್ರಸನ್ನ ಕುಮಾರ್
- ದಕ್ಷಿಣ ಕನ್ನಡ - ಕೆ. ಪ್ರತಾಪ್ ಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ್ ಪೂಜಾರಿ
- ಚಿಕ್ಕಮಗಳೂರು - ಪ್ರಾಣೇಶ್ ಎಂ.ಕೆ
- ಹಾಸನ - ಎಂ.ಎ.ಗೋಪಾಲಸ್ವಾಮಿ
- ತುಮಕೂರು - ಕಾಂತರಾಜ್ ( ಬಿಎಂಎಲ್)
- ಮಂಡ್ಯ - ಎನ್ ಅಪ್ಪಾಜಿ ಗೌಡ
- ಬೆಂಗಳೂರು - ಎಂ ನಾರಾಯಣಸ್ವಾಮಿ
- ಬೆಂಗಳೂರು ಗ್ರಾಮಾಂತರ - ಎಸ್ ರವಿ
- ಕೋಲಾರ್ - ಸಿ ಆರ್ ಮೋಹನ್
- ಕೊಡಗು - ಸುನೀಲ್ ಸುಬ್ರಹ್ಮಣಿ ಎಂ.ಪಿ.
- ಮೈಸೂರು - ಆರ್ ಧರ್ಮಸೇನ, ಎಸ್ ನಾಗರಾಜು ( ಸಂದೇಶ್ ನಾಗರಾಜು )