ಜೂಲಿಯಟ್​ ಆಗಿ ತೆರೆಮೇಲೆ ಬರಲು ರೆಡಿಯಾದ ಬೃಂದಾ ಆಚಾರ್ಯ

ಜೂಲಿಯಟ್​ ಆಗಿ ತೆರೆಮೇಲೆ ಬರಲು ರೆಡಿಯಾದ ಬೃಂದಾ ಆಚಾರ್ಯ

2021ರಲ್ಲಿ ತೆರೆಗೆ ಬಂದ ನೆನಪಿರಲಿ ಪ್ರೇಮ್‌‌‌ & ಬೃಂದಾ ಆಚಾರ್ಯ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಚಿತ್ರದ ನಟಿ ಬೃಂದಾ ಆಚಾರ್ಯ ಅವರು ನಟನೆಯ ಮೂಲಕ ಮೋಡಿ ಮಾಡಿದ್ದರು. ಇದೀಗ ಅವರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಜೂಲಿಯಟ್‌‌ 2 ಸಿನಿಮಾದ ಮೂಲಕ ತೆರೆಮೇಲೆ ಬರಲು ಬೃಂದಾ ಆಚಾರ್ಯ ರೆಡಿ ಆಗಿದ್ದಾರೆ. ಬೃಂದಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌‌ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.