ವಿಕ್ರಾಂತ್ ರೋಣನ ಬಗ್ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತಹ ಸುದ್ದಿ ನೀಡಿದ ರವಿಶಂಕರ್ ಗೌಡ!
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಟ ರವಿಶಂಕರ್ ಗೌಡ ಆಡಿರುವ ಮಾತುಗಳಿಂದ ಸುದೀಪ್ ಅಭಿಮಾನಿಗಳಿಗಳಲ್ಲಿ ಸಂತಸದ ಕಟ್ಟೆ ಹೊಡೆದಿದ್ದು, ಚಿತ್ರದ ಬಗೆಗಿನ ಕೂತಹಲ ನೂರ್ಮಡಿ ಆಗಿದೆ.
ಚಿತ್ರದ ಡಬ್ಬಿಂಗ್ ಪೂರ್ಣಗೊಳಿಸಿರುವ ನಟ ರವಿಶಂಕರ್, ಟ್ವೀಟ್ ಮೂಲಕ ಚಿತ್ರದ ಬಗ್ಗೆ ಹೇಳಿರುವ ಮಾತುಗಳು ರೋಮಾಂಚನಕಾರಿಯಾಗಿದೆ. ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ. ಕುತೂಹಲದ ಮಹಾಪೂರವಿದೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರದ್ದು ಅಚ್ಚುಕಟ್ಟಾದ ಅಭಿನಯ. ಅಭಿನಂದನೆಗಳು ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಜಾಕ್ ಮಂಜು ಸಾರ್. ಇದಿಷ್ಟು ರವಿಶಂಕರ್ ಟ್ವೀಟ್ನ ಸಾರಾಂಶ.
ಇಡೀ ಸಿನಿಮಾ ನೋಡ್ತಾಯಿದ್ದರೆ, ಜೀವ ನಡುಗುತ್ತೆ ಎಂದು ರವಿಶಂಕರ್ ಹೇಳಿದ್ದು, ವಿಕ್ರಾಂತ್ ರೋಣ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.