ಕಾಂತಾರ ಹೊಸ ದಾಖಲೆ ; ಹಿಂದಿ ಗಳಿಕೆ ಎಷ್ಟು ಗೊತ್ತೇ ?

ನವದೆಹಲಿ: ಹೊಂಬಾಳೆ ಫಿಲಂಸ್ ನ ‘ಕಾಂತಾರ’ದ ಮಾಂತ್ರಿಕತೆ ದೇಶದ ಮೂಲೆ ಮೂಲೆಗಳಲ್ಲಿ ನಿರಂತರವಾಗಿ ಸದ್ದು ಮಾಡುತ್ತಿದೆ. ಮೊದಲು ಕನ್ನಡದಲ್ಲಿ ನಂತರ ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಚಿತ್ರ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ.
ನವೆಂಬರ್ 08ರ ಮಂಗಳವಾರದವರೆಗೆ ಹಿಂದಿಯಲ್ಲಿ ಕಾಂತಾರ ಒಟ್ಟು 66.95 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಚಿತ್ರವು ಅಕ್ಟೋಬರ್ 31ರ ಸೋಮವಾರದಂದು ಮತ್ತು ನವೆಂಬರ್ 1 ರಂದು 2.3 ಕೋಟಿ ಗಳಿಕೆಯೊಂದಿಗೆ ಸ್ಥಿರತೆ ಕಾಪಾಡಿಕೊಂಡಿತ್ತು. ನವೆಂಬರ್ 03ರ ಗುರುವಾರ 2.05 ಕೋಟಿ ಮತ್ತು ನವೆಂಬರ್ 04ರ ಶುಕ್ರವಾರ 2.05 ಕೋಟಿ, ನವೆಂಬರ್ 05ರ ಶನಿವಾರದಂದು 4.5 ಕೋಟಿ ಗಳಿಕೆಯೊಂದಿಗೆ ಅತಿ ಕಡಿಮೆ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿತ್ತು.
ನವೆಂಬರ್ 07ರ ಸೋಮವಾರದಂದು 2.6ಕೋಟಿ ರೂಪಾಯಿ ಮತ್ತೆ ಏರಿಕೆ ಕಂಡಿತು. ಈ ಅಸಾಧಾರಣ ಗಳಿಕೆ ದಾಖಲಿಸುವುದರ ಹೊರತಾಗಿ, ಐಎಂಡಿಬಿ ರೇಟಿಂಗ್ ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಭಾರತದ ಪ್ರಸ್ತುತ ಟಾಪ್ 250 ಚಲನಚಿತ್ರಗಳ ಪಟ್ಟಿಯಲ್ಲಿ ‘ಕಾಂತಾರ’ ನಂ. 1 ಸ್ಥಾನದಲ್ಲಿದೆ.