ಸೇವೆ ಮತ್ತು ಸಮರ್ಪಣಾ ಅಭಿಯಾನ, ಗಾಂಧಿ ಜಯಂತಿ ದಿನದಂದು ಸ್ವಚ್ಛತಾ ಕಾರ್ಯ

ಅಣ್ಣಿಗೇರಿ

ಅಣ್ಣಿಗೇರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 2ರ ಶಾಲೆಯಲ್ಲಿ ಭಾರತೀಯ ಜನತಾಪಕ್ಷ ಯುವ ಮೋರ್ಚಾ ಧಾರವಾಡ ಗ್ರಾಮಾಂತರ ಜಿಲ್ಲೆ ಯುವಮೋರ್ಚಾ ವತಿಯಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನ ಪ್ರಯುಕ್ತ ಗಾಂಧಿ ಜಯಂತಿ ದಿನದಂದು ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು ಮತ್ತು ಇದೇ ಸಂದರ್ಭದಲ್ಲಿ ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಬಸವರಾಜ ಕುಂದಗೋಳ ಮಠ ಅವರು ನಗರದ ಗಾಂಧಿ ಕಾಲೋನಿಯಲ್ಲಿ ಗ್ರಾಮವಾಸ್ತವ್ಯ ಮಾಡಿ ಅಲ್ಲಿನ ನಿವಾಸಿಗಳು ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ ಮಾತನಾಡಿದರು. ಈ ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ಬಸವರಾಜ ಕುಂದಗೋಳ ಮಠ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ್, ಬಿಜೆಪಿ ಮುಖಂಡರಾದ ಶಿವಾನಂದ ಹೊಸಳ್ಳಿ, ವೈ ಡಿ ಉಣಕಲ್, ಶರಣು ಹಡಪದ್, ಮರಡಿ, ಜಗದೀಶ್, ಜಗದೀಶ್ ಚೌಡಿ, ಅನ್ನಪ್ಪ ಉಣಕಲ್, ರಾಘವೇಂದ್ರ ರಾಮಗಿರಿ, ಪ್ರಶಾಂತ್ ಬೇವಿನಕಟ್ಟಿ, ಹಿರೇಮಠ್, ಎಲ್ಲಪ್ಪ ಉಣಕಲ್ ಸೇರಿದಂತೆ ಅನೇಕ ಕಾರ್ಯಕರ್ತರು ಮತ್ತು ನಗರದ ಗಣ್ಯರು ಉಪಸ್ಥಿತರಿದ್ದರು.