ರಾಜ್ಯದಲ್ಲಿ ಪ್ರತ್ಯೇಕ 'ಕೇಸರಿ ಶಾಲೆ' ಆರಂಭ ವಿಚಾರ: ಸಿಎಂ ಮಹತ್ವದ ಹೇಳಿಕೆ

ರಾಜ್ಯದಲ್ಲಿ ಕೇಸರಿ ಶಾಲೆ ಆರಂಭಕ್ಕೆ ಹಿಂದೂಪರ ಸಂಘಟನೆಗಳು ಅಭಿಯಾನಕ್ಕೆ ಮುಂದಾಗಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಪ್ರತ್ಯೇಕ ಕೇಸರಿ ಶಾಲೆಗಳನ್ನು ಆರಂಭಿಸುವ ಬಗ್ಗೆ ನಾನು ಮಾತನಾಡಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.