ಸ್ಮಾರ್ಟ್ ಸಿಟಿಯ ಕಾಮಗಾರಿ ಎಡವಟ್ಟು : ಮಂಗಳೂರಿನಲ್ಲಿಅಗೆದಿಟ್ಟ ಗುಂಡಿಗೆ ಬಿದ್ದ ಮಹಿಳೆ, ಗಂಭೀರ ಗಾಯ
ಮಂಗಳೂರು : ಸ್ಮಾರ್ಟ್ ಸಿಟಿಯ ರಸ್ತೆ ಕಾಮಗಾರಿಯ ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಮಹಿಳೆಯೊಬ್ಬರು ಬಿದ್ದು, ಗಂಭೀರ ಗಾಯಗೊಂಡ ಘಟನೆ ಮಂಗಳೂರಿನ ಜ್ಯೋತಿ ವೃತ್ತದ ಸೋಜಾ ಆರ್ಕೇಡ್ ಬಳಿ ನಡೆದಿದೆ
ಜ್ಯೋತಿ ಕೆಎಂಪಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್ ಕಡೆಗೆ ನಡೆದು ಹೋಗುತ್ತಿದ್ದ ಸುಮಾರು 55 ವರ್ಷದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಅಗೆದಿಟ್ಟ ಗುಂಡಿಗೆ ಬಿದ್ದಿದ್ದಾರೆ ಸುಮಾರು ಏಳು ಅಡಿ ಆಳದ ಗುಂಡಿಗೆ ಬಿದ್ದ ಮಹಿಳೆಯನ್ನು ಬಳಿಕ ಸ್ಥಳೀಯರು ಕಷ್ಟಪಟ್ಟು ಹೊರಗೆ ತೆಗೆದಿದ್ದಾರೆ.
ಕೇಬಲ್ ಕಾಮಗಾರಿ ನೆಪದಲ್ಲಿ ಸೋಜಾ ಆರ್ಕೇಡ್ ಎದುರಲ್ಲಿ ಒಂದು ತಿಂಗಳಿನಿಂದ ರಸ್ತೆ ಬದಿ ಗುಂಡಿ ತೆಗೆಯಲಾಗಿದೆ, ಅದನ್ನು ಮುಚ್ಚದೇ ಹಾಗೇ ಬಿಡಲಾಗಿದ್ದು, ಪಾದಚಾರಿಗಳು ನಡೆದು ಹೋಗುವುದಕ್ಕೆ ಕಷ್ಟ ಪಡುತ್ತಿದ್ದಾಳೆ, ಮಹಿಳೆ ಕವುಚಿಕೊಂಡು ಬಿದ್ದಿದ್ದು,ತಲೆಯ ಭಾಗದ ಗುಂಡಿಯ ಒಳಗೆ ಬಿದ್ದಿತ್ತು. ಬೆನ್ನು ಮತ್ತು ಕುತ್ತಿಗೆಯ ಭಾಗಕ್ಕೆ ಗಾಯಗೊಂಡಿದ್ದು, ಜೊತೆಗಿದ್ದು ಗಂಡ ಬಳಿಕ ಅವರನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.