ರಾಜ್ಯದಲ್ಲಿ ಮತ್ತೆ ಧರ್ಮ ಸಂಘರ್ಷ; ಮದರಸಾ ಶಾಲೆ V/S ಕೇಸರಿ ಶಾಲೆಗಳ ಫೈಟ್

ರಾಜ್ಯದಲ್ಲಿ ಮದರಸಾ ಶಾಲೆಗಳನ್ನು ಕೈಬಿಡಿ ಇಲ್ಲವೇ ಕೇಸರಿ ಶಾಲೆ ಆರಂಭಿಸಿ ಎಂದು ರಾಜ್ಯ ಕೇಸರಿ ಒಕ್ಕೂಟ & ಹಿಂದೂ ಸಂಘಟನೆಗಳು ಸಚಿವರಿಗೆ ಮನವಿ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಹಿಜಾಬ್ನಿಂದ ಶುರುವಾಗಿರುವ ಧರ್ಮ ದಂಗಲ್ ಹೊಸ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಇನ್ನು ಕೇಸರಿ ಶಾಲೆಗಳಲ್ಲಿ ಪ್ರತ್ಯೇಕ ಪಠ್ಯ ಇರಬೇಕು. ಪಠ್ಯ ಪುಸ್ತಕಗಳಲ್ಲಿ ಹಿಂದುತ್ವದ ಹಿನ್ನೆಲೆ ಇರುವ ಪಾಠಗಳು ಜೊತೆಗೆ ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಇರಬೇಕು ಎಂದೆಲ್ಲಾ ಡಿಮ್ಯಾಂಡ್ ಮಾಡಿವೆ.