ಮೈಸೂರು-ಗೋವಾ ನಡುವೆ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಲು ಬೇಡಿಕೆ

ಮೈಸೂರಿನಿಂದ ಮಂಗಳೂರು, ಉಡುಪಿ ಮೂಲಕ ಗೋವಾಕ್ಕೆ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಮಂಗಳೂರು, ಉತ್ತರ ಕನ್ನಡ ಭಾಗದ ಸುಮಾರು 5 ಲಕ್ಷ ಜನರು ಮೈಸೂರು & ಮೈಸೂರಿನ ಸುತ್ತಮುತ್ತ ವಾಸವಾಗಿದ್ದಾರೆ. ಮೈಸೂರು-ಗೋವಾ ರೈಲು ಸಂಚಾರ ಆರಂಭಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಿಳಿಸಲಾಗಿದೆ. ಮೈಸೂರಿನಿಂದ ಚೆನ್ನೈಗೆ ವಂದೇ ಭಾರತ್ & ಶತಾಬ್ದಿ ರೈಲು ಸೇರಿ 2 ರೈಲು ಸೇವೆ ಇದೆ. ಇದೇ ಮಾದರಿಯಲ್ಲಿ ಗೋವಾಕ್ಕೆ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿದೆ.