ಉಪ್ಪು ಮೂಟೆಗಳು ಕಳವು | Hosakote |

ಹೊಸಕೋಟೆಯ ಮಾರ್ಕೆಟ್ ರಸ್ತೆಯಲ್ಲಿರುವ ಎಚ್ ಕೆ ಎಂ ಎಂಟಪ್ರ್ರೈಸಸ್ ಅಂಗಡಿಯಲ್ಲಿ ಮಧ್ಯರಾತ್ರಿಯಲ್ಲಿ ಉಪ್ಪು ಮೂಟೆಗಳು ಕಳುವಾಗಿದೆ. ಆಟೋದಲ್ಲಿ ರಾತ್ರಿ ವೇಳೆ ಬಂದ ಕಳ್ಳರು ಎಂಟು ಉಪ್ಪು ಮೂಟೆಗಳನ್ನು ಹೊತ್ತೊಯ್ದಿದ್ದಾರೆ. ಇದಕ್ಕೂ ಒಂದು ತಿಂಗಳ ಹಿಂದೆ ಎಹ್. ಕೆ.ಎಂ ಅಂಗಡಿ ಮುಂದೆ ಇರುವ ಸತೀಶ್ ಮಳಿಗೆ ಅಂಗಡಿಯಲ್ಲಿ 450 ರೂಪಾಯಿಗಳ ಬೆಲೆ ಬಾಳುವ ಎಪ್ಪತ್ತು ಉಪ್ಪು ಮೂಟೆಯನ್ನು ಕಳ್ಳರು ದೋಚಿದ್ದರು. ಕಳವು ಮಾಡುತ್ತಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.