ಹಾಡಿಗೆ ಮನಸೋತ ಅಭಿಮಾನಿ, ಗಾಯಕಿ ಮೇಲೆ ಬಕೆಟ್ ಗಟ್ಟಲೆ ನೋಟು ಸುರಿದ ಫ್ಯಾನ್

ನವದೆಹಲಿ : ನಮ್ಮ ದೇಶದಲ್ಲಿ ಕಲಾವಿದರಿಗೂ ಕೊರತೆಯಿಲ್ಲ, ಕಲೆಯ ಆರಾಧಕರಿಗೂ ಕಡಿಮೆಯಿಲ್ಲ. ದೇಶದೆಲ್ಲೆಡೆ ಕಲಾಭಿಮಾನಿಗಳನ್ನು ನಾವು ನೋಡಬಹುದು. ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ ಅವರಿಂದ ಹಿಡಿದು ಜುಬಿನ್ ನೌಟಿಯಾಲ್ ವರೆಗೆ ಅನೇಕ ಗಾಯಕರು ದೇಶದಲ್ಲಿ ಅಪಾರ ಪ್ರೀತಿ ಅಭಿಮಾನವನ್ನು ಪಡೆದಿದ್ದಾರೆ.
ಗಾಯಕಿಯ ಕಂಠಕ್ಕೆ ಅಭಿಮಾನಿಯ ಮೆಚ್ಚುಗೆ :
ಈ ವಿಡಿಯೋದಲ್ಲಿ ಗುಜರಾತಿ ಗಾಯಕಿ ಊರ್ವಶಿ ರಾಡಿಯಾ (Urvashi raddiya)ವೇದಿಕೆಯ ಮೇಲೆ ಕುಳಿತು ಸ್ತೋತ್ರವನ್ನು ಪಠಿಸುತ್ತಿರುವುದನ್ನು ನೋಡಬಹುದು. ಗಾಯಕಿ ಊರ್ವಶಿ, ಭಜನೆಗಳನ್ನು ಹಾಡಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಅವರ ಗಾಯನಕ್ಕೆ ಆಕರ್ಷಿತರಾದ ಅಭಿಮಾನಿಯೊಬ್ಬರು, ಬಕೆಟ್ ತುಂಬಾ ನೋಟುಗಳನ್ನು ಹಿಡಿದು ವೇದಿಕೆಯ ಮೇಲೆ ಬರುತ್ತಾರೆ. ಗಾಯಕಿ ಹಾಡುತ್ತಿದ್ದಂತೆಯೇ ಅವರ ಮೇಲೆ ನೋಟಿನ (Note) ಮಳೆಗರೆಯುತ್ತಾರೆ. ಗಾಯಕಿ ಸಂಪೂರ್ಣ ನೋಟಿನಿಂದ ಮುಚ್ಚಲ್ಪಡುವುದನ್ನು ಇಲ್ಲಿ ಕಾಣಬಹುದು.