ಮಿಜೋರಾಂ ಸೇರಿ ಭಾರತ -ಮಯನ್ಮಾರ್ ಗಡಿಯಲ್ಲಿ ಪ್ರಬಲ ಭೂಕಂಪ
ನವದೆಹಲಿ: ಬಾಂಗ್ಲಾದೇಶದ ಚಿತ್ತಗಾಂಗ್ ಬಳಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.3 ರಷ್ಟು ದಾಖಲಾಗಿದೆ.
ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿ ಭೂಮಿ ಕಂಪಿಸಿದೆ. ಮಿಜೋರಾಂನ ಥೆನ್ಜಾಲ್ ಬಳಿ ಬೆಳಗ್ಗೆ 5.15 ಕ್ಕೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.1 ರಷ್ಟು ದಾಖಲಾಗಿದೆ.
ಇಂದು ಮುಂಜಾನೆ 5:15 ರ ಸುಮಾರಿಗೆ 6.1 ತೀವ್ರತೆಯ ಭೂಕಂಪವು ಮಿಜೋರಾಂನ ಥೆನ್ಜಾಲ್ ಬಳಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.