ನಾಯಿ ಕಳ್ಳರಿದ್ದಾರೆ ಹುಷಾರ್‌

ನಾಯಿ ಕಳ್ಳರಿದ್ದಾರೆ ಹುಷಾರ್‌

ಬಿಸ್ಕೆಟ್‌ ಹಾಕಿ ಶ್ವಾನವನ್ನು ಕದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾರತಳ್ಳಿಯ ಬಿಆರ್‌‌ ಲೇಔಟ್‌ನ ಮುರಳಿ ಮಾಧವ್‌ ಎಂಬವರ ಗೋಲ್ಡನ್ ರಿಟ್ರೀವರ್ ತಳಿಯ ಶ್ವಾನವನ್ನು ಖದೀಮ ಕದ್ದು ಎಸ್ಕೇಪ್‌ ಆಗಿದ್ದಾನೆ. ಮನೆಯಿಂದ ಹೊರಬಂದಿದ್ದ ಶ್ವಾನಕ್ಕೆ ಬಿಸ್ಕೆಟ್‌ ತಿನ್ನಿಸಿ, ಬೈಕ್‌ ಹತ್ತಿಸಲು ಕಳ್ಳ ಯತ್ನಿಸಿದ್ದಾನೆ. ಆದರೆ, ಬೈಕ್‌‌ ಹತ್ತದೇ ಇದ್ದಾಗ, ಆತ ಶ್ವಾನವನ್ನು ಕೈಯಲ್ಲೇ ಎತ್ತಿಕೊಂಡು ಹೋಗಿದ್ದಾನೆ. ಘಟನೆ ಸಂಬಂಧ ಶ್ವಾನದ ಮಾಲೀಕ ಮಾರತಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.