ಆನೇಕಲ್‌ ನಲ್ಲಿ ಪೊಲೀಸರ ಕಿರುಳಕ್ಕೆ ಬೇಸತ್ತು ಯವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಆನೇಕಲ್‌ ನಲ್ಲಿ ಪೊಲೀಸರ ಕಿರುಳಕ್ಕೆ ಬೇಸತ್ತು ಯವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರ ಕಿರುಳಕ್ಕೆ ಬೇಸತ್ತು ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಭೋವಿಪಾಳ್ಯದ ನಿವಾಸಿ ಸುರೇಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಈತ ಡ್ರೈವರ್‌ ಆಗಿ ಕೆಲಸಮಾಡಿಕೊಂಡಿದ್ದ. ಹೀಗಾಗಿ ಇತ್ತೀಚೆಗಷ್ಟೇ ಸರ್ಜಾಪುರದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದ.ಪೊಲೀಸರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸುರೇಶ್ ವೀಡಿಯೋ ಮಾಡಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾನೆ.

ಸುರೇಶ್ ಕಾಡಗೋಡಿ ಸಮೀಪದ ಸೀಗೆಹಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೀತಿಯ ವಿಚಾರ ಯುವತಿಯ ತಂದೆ-ತಾಯಿಗೆ ತಿಳಿದು ಪೊಲೀಸರ ಮೂಲಕ ಕರೆ ಮಾಡಿಸಿ, ಅತ್ಯಾಚಾರದ ಕೇಸ್ ದಾಖಲಿಸುವುದಾಗಿ ಹೆದರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುರೇಶ್, ನನ್ನ ಸಾವಿಗೆ ಕಾಡುಗೋಡಿ ಪೊಲೀಸರು, ಯುವತಿಯ ತಂದೆ-ತಾಯಿ ಹಾಗೂ ಮತ್ತೊಂದು ಯುವತಿ ಕಾರಣ ಎಂದು ಆರೋಪಿಸಿದ್ದಾನೆ.

ಅದಾದ ಬಳಿಕವೂ ಕಳೆದ ಒಂದು ವಾರದಿಂದ ಪೊಲೀಸರೆಂದು ಹೇಳಿಕೊಂಡು ನಿರಂತರ ಕರೆಗಳು ಬರುತ್ತಿದ್ದವು. ಅಷ್ಟೇ ಅಲ್ಲದೇ ಠಾಣೆಗೆ ಬರುವಂತೆ ನಿರಂತರವಾಗಿ ಫೋನ್ ಮಾಡುತ್ತಿದ್ದ ಆರೋಪವೂ ಕೇಳಿಬಂದಿದೆ.ಫೋನ್ ಕರೆಗಳಿಂದ ಗಾಬರಿಗೊಂಡಿದ್ದ ಸುರೇಶ್ ಇಲಿ ಪಾಷಾಣ ಸೇವಿಸಿದ್ದಾನೆ. ಈ ಸಂಬಂಧ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.