ಪುನೀತ್ ಮೇಲೆ ವಿಭಿನ್ನ ರೀತಿಯ ಅಭಿಮಾನ ತೋರಿದ ಶ್ಯಾಮ್... |Dharwad|

ಅಪ್ಪು ಅವರು ಹಾಡಿರುವ ಕೊನೆಯ ಚಿತ್ರದ ಸಾಂಗ್ ಅವರ ಸಾವಿನ ನಂತರ ಎಲ್ಲೇಡೆ ವೈರಲ್ ಆಗಿದೆ. ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿದೆ ಎನ್ನುವ ಹಾಡಿಗೆ ಅದ್ಭುತವಾಗಿ ಧಾರವಾಡದ ಕ್ಯಾಮರಾಮನ್ ಒಬ್ಬರು ಎಡಿಟಿಂಗ್ ಮಾಡಿದ್ದಾರೆ. ವೃತ್ತಿಯಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಶ್ಯಾಮ್ ಎನ್ನುವ ಯುವಕ ಪುನೀತ ಅವರ ಅಪ್ಪಟ ಅಭಿಮಾನಿಯಾಗಿದ್ದು. ಪುನೀತ್ ಅಗಲಿಕೆಯಿಂದ ವಿಚಲಿತರಾಗಿರುವ ಶ್ಯಾಮ್ ನಿತ್ಯ ಅವರದೇ ಯೋಚನೆಯಲ್ಲಿ ಇರ್ತಾರೆ. ಸದಾಕಾಲ ಅವರ ಸಿನಿಮಾದ ಹಾಡುಗಳನ್ನು ನೆನೆಯುತ್ತಾರೆ ಈ ಶ್ಯಾಮ್. ನಿನ್ನೆ ದಿನ ತನ್ನ ಮನೆ ಮುಂದೆ ಕುಳಿತಾಗ ಮಳೆ ವಿಡಿಯೋವನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು ಪುನೀತ್ ಅವರು ಹಾಡಿರುವ ಹಾಡನ್ನು ಸಂಕಲನ ಮಾಡಿದ್ದಾರೆ. ಈ ವಿಡಿಯೋ ನೋಡಿ ಇದೀಗ ಎಲ್ಲರಿಂದ ಶ್ಯಾಮಗೆ ಸುಪರ್ ಎಡಿಟಿಂಗ್ ಎನ್ನುವ ಅಭಿನಂದನೆ ಹಾರೈಕೆಗಳು ಬರುತ್ತಿವೆ.