ತಾರಕ್ಕೇರಿಗೆ ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದ: ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಕರವೇ ಕರೆ
ಬೆಳಗಾವಿ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಬೆಳಗಾವಿ ಗಡಿ ವಿವಾಧ ತಾರಕಕ್ಕೇರಿದೆ. ಮಹಾ ಸಚಿದ್ವಯರು ಬೆಳಗಾವಿ ಭೇಟಿ ರದ್ದುಗೊಂಡ ಬೆನ್ನಲ್ಲೇ, ಗಡಿ ಭಾಗದಲ್ಲಿ ಕರವೇ ಪ್ರತಿಭಟನೆಗೆ ಇಳಿದಿದೆ. ಅಲ್ಲದೇ ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಕರೆ ನೀಡಲಾಗಿದೆ.
ಈ ಬಗ್ಗೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು, ಮಹಾರಾಷ್ಟ್ರ ಬೆಳಗಾವಿ ಗಡಿಯ ವಿಚಾರವಾಗಿ ಪದೇ ಪದೇ ಖ್ಯಾತೆ ತೆಗೆಯುತ್ತಿದೆ. ಇದು ಸರಿಯಲ್ಲ. ಗಡಿ, ಭಾಷೆಯ ವಿಚಾರದಲ್ಲಿ ಕನ್ನಡಿಗರನ್ನು ಕೆಣಕಿದರೇ ಸರಿಯಲ್ಲ ಎಂಬುದಾಗಿ ಗುಡುಗಿದರು.
ಬೆಳಗಾವಿ ಗಡಿ ಕ್ಯಾತೆಯನ್ನು ತೆಗೆಯುತ್ತಿರುವಂತ ಮಹರಾಷ್ಟ್ರ ಸರ್ಕಾರದ ವಿರುದ್ಧ ನಾಳೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕರವೇಯಿಂದ ಪ್ರತಿಭಟನೆ ನಡೆಸಲಾಗುತ್ತದೆ. ಈ ಮೂಲಕ ಮಹಾರಾಷ್ಟ್ರ ಕ್ಯಾತೆಗೆ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದು ಹೇಳಿದರು.